ದಾವಣಗೆರೆ: ಮೂಲ ಅನುಭವ ಮಂಟಪದ ಬಗ್ಗೆ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೂಲ ಅನುಭವ ಮಂಟಪದ ಬಗ್ಗೆ ಹೇಳಿಕೆ ನೀಡಿದ್ದೇನೆ. ನಾನು ಬೀದರ್ ಉಸ್ತುವಾರಿ ಸಚಿವನಾಗಿದ್ದಾಗ ಗೋರು ಚನ್ನಬಸವ ನೇತೃತ್ವದಲ್ಲಿ ಮಂಡಳಿ ಮಾಡಿದ್ವಿ. ಅದಕ್ಕೂ ಹಿಂದೆ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಅಧ್ಯಕ್ಷರಾಗಿ ಜಾಮದಾರ್ ಇದ್ದರು. ಅವರೆಲ್ಲ ಸೇರಿ ಸಂಶೋಧನೆ ಮಾಡಿದ್ದಾರೆ ಎಂದು ಹೇಳಿದರು.
ಮೂಲ ಅನುಭವ ಮಂಟಪದ ಬಗ್ಗೆ ಗೊಂದಲ ಸೃಷ್ಟಿ ಸರಿಯಲ್ಲ: ಈಶ್ವರ್ ಖಂಡ್ರೆ - Eshwar Khandre statement about anubhav mantapa
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಎಲ್ಲಿ ಶಿವಶರಣರ ಜೊತೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೋ ಅಲ್ಲೇ ಅನುಭವ ಮಂಟಪ. ಈ ಬಗ್ಗೆ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮೂಲ ಅನುಭವ ಮಂಟಪದ ಬಗ್ಗೆ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ: ಈಶ್ವರ್ ಖಂಡ್ರೆ
ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಡಿಯನ್ನು ಕೇಂದ್ರ ಸರ್ಕಾರ ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದೆ. ಪೊಲೀಸರನ್ನು ಬಿಜೆಪಿ ಪ್ರೈವೇಟ್ ಆರ್ಮಿಯಾಗಿ ಮಾಡಿಕೊಂಡಿದೆ. ಇದು ಸಂವಿಧಾನ ವಿರೋಧಿ ನಡೆ. ಆದ್ದರಿಂದ ನ್ಯಾಯ ಸಿಗುವರೆಗೋ ಹೋರಾಟ ಮಾಡುತ್ತೇವೆ ಎಂದರು.
ಇದನ್ನೂ ಓದಿ:ನಮ್ಮ ಮನೆ ಯಾಕೆ ರಾಜಕೀಯ ಪವರ್ ಸೆಂಟರ್ ಆಗಬಾರದು?: ಶಾಮನೂರು ಶಿವಶಂಕರಪ್ಪ