ಕರ್ನಾಟಕ

karnataka

ETV Bharat / state

ಕರ್ನಾಟಕದ ಒಂದಿಂಚೂ ಜಮೀನು ಈಕಡೆಯಿಂದ ಆ ಕಡೆ ಹೋಗಲು ಸಾಧ್ಯವೇ ಇಲ್ಲ: ಈಶ್ವರ್ ಖಂಡ್ರೆ

ಇದೇ ಡಿಸೆಂಬರ್ 24, 25 ಮತ್ತು 26ರಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದಿಂದ ದಾವಣಗೆರೆಯಲ್ಲಿ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರ್​ ಖಂಡ್ರೆ ಹೇಳಿದ್ದಾರೆ.

ishwar-khandre-spoke-about-border-dispute
ಕರ್ನಾಟಕದ ಒಂದಿಂಚು ಜಮೀನು ಈಕಡೆಯಿಂದ ಆ ಕಡೆ ಹೋಗಲು ಸಾಧ್ಯವೇ ಇಲ್ಲ : ಈಶ್ವರ್ ಖಂಡ್ರೆ

By

Published : Dec 5, 2022, 7:07 PM IST

ದಾವಣಗೆರೆ: ಗಡಿವಿವಾದ ಇಲ್ಲವೇ ಇಲ್ಲ. ರಾಜ್ಯದ ಒಂದಿಂಚು ಜಮೀನು ಈ ಕಡೆಯಿಂದ ಆ ಕಡೆ ಹೋಗಲು ಸಾಧ್ಯವೇ ಇಲ್ಲ. ಸುಪ್ರೀಂಕೋರ್ಟ್​ನಲ್ಲಿ ಮಹಾರಾಷ್ಟ್ರ ಸರ್ಕಾರ ಅರ್ಜಿ ಸಲ್ಲಿಸಿದೆ. ಕಾನೂನು ಬದ್ಧವಾಗಿ ಮತ್ತು ಸಂವಿಧಾನಬದ್ಧವಾಗಿ ಸುಪ್ರೀಂಕೋರ್ಟ್​ ಈ ಅರ್ಜಿಯನ್ನು ತಿರಸ್ಕರಿಸಿ ಮಹಾರಾಷ್ಟ್ರ ಸರ್ಕಾರದ ಮೇಲೆ ಹತ್ತು ಪಟ್ಟು ದಂಡ ಪ್ರಯೋಗ ಮಾಡಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮಾಡಬೇಕು ಎಂದು ಸರ್ಕಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡುತ್ತಿರುವುದು

ಅರ್ಜಿ ಹಾಕಿದವರಿಗೆ ಮಾತ್ರ ಬಿ ಫಾರ್ಮ್: ಯಾರು ಟಿಕೆಟ್​ಗಾಗಿ ಅರ್ಜಿ ಹಾಕಿದ್ದಾರೋ ಅಂತಹವರಿಗೆ ಮಾತ್ರ ಟಿಕೆಟ್ ಕೊಡಲಾಗುವುದು. ಅಂತಿಮ ತೀರ್ಮಾನವನ್ನು ನಮ್ಮ ನಾಯಕರು ತೆಗೆದುಕೊಳ್ಳಲಿದ್ದಾರೆ. ಆದರೆ, ಬಿ ಫಾರ್ಮ್​ ಹರಿದಂತೂ ಕೊಡಲಾಗುವುದಿಲ್ಲ. ಅರ್ಜಿ ಹಾಕಿದ ಶೇ.99 ಮಂದಿಗೆ ಮಾತ್ರ ನಾವು ಟಿಕೆಟ್ ಕೊಟ್ಟೇ ಕೊಡುತ್ತೇವೆ. ಉಳಿದಂತೆ ಶೇ.1 ರಷ್ಟು ಟಿಕೆಟ್​ನ್ನು ಅಧ್ಯಕ್ಷರು, ಹೈಕಮಾಂಡ್ ಯಾರಾದರೂ ಅಭ್ಯರ್ಥಿಗಳು ವಿಶೇಷವಾಗಿದ್ದರೇ ಅವರನ್ನು ಪರಿಗಣಿಸಿ ಕೊಡಲೂಬಹುದು. ನಾನು ಕೂಡ ಅರ್ಜಿ ಸಲ್ಲಿಸಿದ್ದೇನೆ ಎಂದರು.

ಬಿಜೆಪಿ ಪಕ್ಷದಲ್ಲಿ ರೌಡಿ ಪ್ರಕೋಷ್ಠ ನಡೆಯಲಿ: ಬಿಜೆಪಿಯವರ ಬಳಿ ಸುಳ್ಳಿನ ಕಾರ್ಖಾನೆ ಇದೆ. ಸುಳ್ಳನ್ನೇ ಸತ್ಯ ಎಂದು ಬಿಂಬಿಸುತ್ತಾರೆ. ವಿಪಕ್ಷದವರಿಗೆ ಇಡಿ, ಐಟಿ ಎಂದು ಹೆದರಿಸಿ ಸುಳ್ಳು ಕೇಸ್​ಗಳನ್ನು ದಾಖಲಿಸುತ್ತಾರೆ. ಬಿಜೆಪಿಯು ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂಬ ಚಿಂತೆಯಿಂದಾಗಿ ತಮ್ಮ ಪಕ್ಷದಲ್ಲಿ ರೌಡಿಗಳಿಗೂ ಅವಕಾಶ ಕಲ್ಪಿಸುತ್ತಿದ್ದಾರೆ. ಅವರ ಪಕ್ಷದಲ್ಲಿ ರೌಡಿ ಪ್ರಕೋಷ್ಠ ನಡೆಯಲಿ ಎಂದು ಟಾಂಗ್ ನೀಡಿದರು.

ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಧಿವೇಶನ: ಇದೇ ಡಿಸೆಂಬರ್ 24,25 ಮತ್ತು 26ರಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದಿಂದ ದಾವಣಗೆರೆಯಲ್ಲಿ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸಲಿದ್ದಾರೆ. ಅಲ್ಲದೇ ಒಬಿಸಿ ಪಟ್ಟಿಯಲ್ಲಿ ಎಲ್ಲ ವೀರಶೈವ ಒಳಪಂಗಡಗಳನ್ನು ಸೇರಿಸಬೇಕು ಎಂದು ಒತ್ತಾಯಿಸಲಾಗಿದೆ.

ಲಿಂಗಾಯತ ವೀರಶೈವರಿಗೆ ಪ್ರತ್ಯೇಕ ಧರ್ಮ ಸ್ಥಾಪನೆ‌ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಬಗ್ಗೆ ಮಹಾ ಅಧಿವೇಶನದಲ್ಲಿ ಚರ್ಚೆಯಾಗಲಿದೆ ಎಂದು ಭಾರತೀಯ ವೀರಶೈವ ಲಿಂಗಾಯುತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಈಶ್ವರ್ ಖಂಡ್ರೆ ಪ್ರತ್ಯೇಕ ಧರ್ಮದ ಬಗ್ಗೆ ಸುಳಿವು ಬಿಟ್ಟುಕೊಟ್ಟರು.

ಇದನ್ನೂ ಓದಿ:ಗಡಿ‌ ಕನ್ನಡಿಗರ ಆಕ್ರೋಶಕ್ಕೆ ಮಣಿದು ತರಾತುರಿಯಲ್ಲಿ 'ಮಹಾ' ಸಚಿವರ ಭೇಟಿ!

ABOUT THE AUTHOR

...view details