ಕರ್ನಾಟಕ

karnataka

ETV Bharat / state

ಮಗು ಅದಲು ಬದಲು ಆರೋಪ : ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ - davangere hospital latest issue

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂದು ಮಗುವಿನ ಪೋಷಕರು ಆಸ್ಪತ್ರೆ ವಿರುದ್ಧ ಆರೋಪ ಮಾಡಿ ಆಕ್ರೋಶ ಹೊರಹಾಕಿರುವ ಪ್ರಕರಣ ನಡೆದಿದೆ.

infants exchange alligation  against davangere hospital
ವೈದ್ಯರ ವಿರುದ್ಧ ಆಕ್ರೋಶ

By

Published : Jan 3, 2021, 1:32 PM IST

ದಾವಣಗೆರೆ:ನಗರದ ಜಿಲ್ಲಾಸ್ಪತ್ರೆಯಲ್ಲಿ ಮಗು ಅದಲು ಬದಲು ಮಾಡಿರುವ ಆರೋಪ ಕೇಳಿ ಬಂದಿದೆ.

ವೈದ್ಯರ ವಿರುದ್ಧ ಆಕ್ರೋಶ

ಗಂಡು ಮಗು ಆಗಿದೆ ಎಂದು ಪೋಷಕರಿಗೆ ತಿಳಿಸಿದ್ದ ಸಿಬ್ಬಂದಿ, ಎರಡು ಗಂಟೆ ಬಳಿಕ ಮಗುವನ್ನ ಕೈಗೆ ಕೊಟ್ಟಿದ್ದರು. ಬಳಿಕ ಬಂದು ನಿಮಗೆ ಆಗಿರುವುದು ಹೆಣ್ಣು ಮಗು, ಈ ಮಗು ಕೊಡಿ ಎಂದು ಗಂಡು ಮಗುವನ್ನು ಸಿಬ್ಬಂದಿ ತೆಗೆದುಕೊಂಡಿದ್ದಾರೆ ಎಂದು ಪೋಷಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದಾರೆ.

ದಾವಣಗೆರೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಮಗು ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಮಾಕನಡುಕು ಗ್ರಾಮದ ನಿವಾಸಿ ನಾಗರಾಜ್-ಮಾರಕ್ಕ ದಂಪತಿಗೆ ಸೇರಿದ್ದು, 2 ಗಂಟೆ ಬಳಿಕ ನಿಮಗೆ ಹೆಣ್ಣು ಮಗು ಹುಟ್ಟಿದೆ, ಐಸಿಯುನಲ್ಲಿದೆ, ಇದು ನಿಮ್ಮದಲ್ಲ ಎಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಗಂಡು ಮಗು ಕಿತ್ತುಕೊಂಡು ಹೋಗಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

ನಮಗೆ ನಮ್ಮ ಗಂಡು ಮಗು ಕೊಡಿ ಎಂದು ಆಸ್ಪತ್ರೆ ಮುಂಭಾಗ ಪೋಷಕರು ಗಲಾಟೆ ನಡೆಸಿದ್ದು, ಆಸ್ಪತ್ರೆಯಲ್ಲಿ ಮಗು ಮಾರಾಟ ಜಾಲ ಇದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.‌ ಸ್ಥಳಕ್ಕೆ ಬಡಾವಣೆ ಠಾಣೆ ಪಿಎಸ್​ಐ ಅರವಿಂದ್ ಭೇಟಿ ಪರಿಶೀಲನೆ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

ಇದನ್ನೂ ಓದಿ:ಹೋರಾಟಕ್ಕೆ ಮಣಿಯದ ಸರ್ಕಾರ: ಸಿಂಘು ಗಡಿಯಲ್ಲಿ ಮತ್ತೊಬ್ಬ ರೈತ ಸಾವು

ABOUT THE AUTHOR

...view details