ಕರ್ನಾಟಕ

karnataka

ETV Bharat / state

ನಿಜವಾದ ರಕ್ತ ಹರಿಯುತ್ತಿದ್ದರೆ ಚರ್ಚೆಗೆ ಬರಲಿ : ಯಶವಂತ್ ರಾವ್ ಜಾದವ್ ಸವಾಲ್​ - ಚರ್ಚೆ

ಅಭಿವೃದ್ಧಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರತಿ ಸವಾಲು ಹಾಕಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್ ಜಾದವ್.

ಅಭಿವೃದ್ದಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರತಿ ಸವಾಲು ಹಾಕಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್

By

Published : Mar 24, 2019, 4:14 AM IST

ದಾವಣಗೆರೆ : ದಾವಣಗೆರೆ ಲೋಕಸಭಾ ಚುನಾವಣಾ ಕಾವು ರಂಗೇರ ತೋಡಗಿದೆ. ನಿನ್ನೆ ಅಭಿವೃದ್ದಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಇಂದು ಜಿಲ್ಲಾ ಬಿಜೆಪಿ ಪ್ರತಿ ಸವಾಲು ಹಾಕಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್ ಜಾದವ್, ಮಾಜಿ ಸಚಿವ ಎಸ್ ಮಲ್ಲಿಕಾರ್ಜುನ್ ಅವರಲ್ಲಿ ನಿಜವಾದ ರಕ್ತ ಹರಿಯುತ್ತಿದ್ದರೆ ಚರ್ಚೆಗೆ ಬರಲಿ, ದಾಖಲೆ ಸಮೇತ ನಾವೂ ಚರ್ಚೆಗೆ ಸಿದ್ದರಿದ್ದೇವೆ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ಅಭಿವೃದ್ದಿ ವಿಚಾರವಾಗಿ ಸವಾಲ್ ಹಾಕಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರತಿ ಸವಾಲು ಹಾಕಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್

ವಿಧಾನಸಭಾ, ಲೋಕಸಭೆ ಚುನಾವಣೆ ಸೋಲುಗಳಿಂದ ಮಲ್ಲಿಕಾರ್ಜುನ್ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ವೃತ್ತಿಯಾಗಲಿ ಅದಕ್ಕೆ ಘನತೆ ಇರುತ್ತದೆ. ಏಕವಚನದಲ್ಲಿ ಸಂಬೋದಿಸುವುದು ಸರಿಯಲ್ಲ ಎಂದು ಯಶವಂತ್ ರಾವ್ ಕಿಡಿಕಾರಿದ್ದಾರೆ.

ಈ ಹಿಂದೆ ಗಾಂಜಿ ವೀರಪ್ಪ ಸಮಾಧಿ ಪ್ರಕರಣ, ಅಕ್ಕಿ‌ಲೂಟಿ, ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಮುಂದಿಟ್ಟು ಚರ್ಚೆಗೆ ಕರೆದಿದ್ದೆವು, ಆದರೆ ಅವರು ಬರಲಿಲ್ಲ. ಇವಾಗಲಾದರೂ ಚರ್ಚೆಗೆ ಬನ್ನಿ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ABOUT THE AUTHOR

...view details