ದಾವಣಗೆರೆ: ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನದಲ್ಲಿ ಬಂದಿದೆ. ಮೈತ್ರಿ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ, ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಗಳು ನಿರ್ಣಯ ಮಾಡುತ್ತಾರೆ, ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಮಾತಾಡೋದಿಲ್ಲ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ನಿರಾಣಿಯವರು ಬಿಜೆಪಿಯವರೇ, ಮೇಯರ್ ಆಗ್ತಾರೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಾನು ಮಾತನಾಡುವುದಿಲ್ಲ. ರಾಜ್ಯ ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇದೆ, ಮೈತ್ರಿ ಬಗ್ಗೆ ಮಾತಾಡೋದಿಲ್ಲ ಎಂದು ಹೇಳಿದರು.
ಶ್ರೀಮಂತ್ ಪಾಟೀಲ್ ಬಿಜೆಪಿ ಸೇರಲು ಹಣದ ಅಫರ್ ಕೊಟ್ಟಿದ್ದರು ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಜೆಡಿಎಸ್ ಶಾಸಕರು ಯಡಿಯೂರಪ್ಪ ನವರ ನಾಯಕತ್ವ ನಂಬಿ ಬಂದಿದ್ದು. ಅಮಿತ್ ಷಾ ಬಂದಾಗ ನಾವೆಲ್ಲರೂ ಸ್ವಾಗತ ಮಾಡಿದ್ವಿ, ಆ ಸಂದರ್ಭದಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚೆ ಆಗಿಲ್ಲ. ಐದು ಜನ ಶಾಸಕರು ಇದ್ದಾರೆ, ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಮೊದಲಿನಿಂದಲೂ ಕೇಳಿದ್ದೇವೆ ಎಂದರು.