ದಾವಣಗೆರೆ:ಯಾರ ಹುನ್ನಾರ, ಯಾರ ಪಿತೂರಿಯೂ ನನಗೆ ಗೊತ್ತಿಲ್ಲ. ಯಾವ ರಾಜಕಾರಣನೂ ನನಗೆ ಗೊತ್ತಿಲ್ಲ. ಕನ್ನಡ ಭಾಷೆ, ನೆಲಕ್ಕೆ ಅಪಚಾರ ಮಾಡುವ ಯಾವುದೇ ಕೆಲಸದಲ್ಲಿ ನಾನು ಭಾಗಿಯಾಗುವುದಿಲ್ಲ. ನಮಗೆ ಬೇಕಾಗಿರುವುದು ನಾಡು ಹಾಗೂ ನಾಡಿನ ಅಸ್ಮಿತೆ ಮಾತ್ರ ಎಂದು ನಟ ಸುಚೇಂದ್ರ ಪ್ರಸಾದ್ ತಿಳಿಸಿದರು.
ಕನ್ನಡ ಹಾಗೂ ಹಿಂದೆ ಭಾಷಾ ವಿವಾದ ಹಿನ್ನೆಲೆ ಮಾತನಾಡಿದ ಅವರು, ನಾಡು ಅಂದ್ರೆ ಕೇವಲ ಭೂಪಟ ನಕ್ಷೆ, ನಕಾಶೆ ಅಲ್ಲ. ನಾವು ಹೊಂದಿಕೊಂಡು ಬಂದ ಸಂಸ್ಕೃತಿ ಪರಂಪರೆಗಳು ಮುಖ್ಯ, ಕನ್ನಡ ಸಮೃದ್ಧ ಭಾಷೆಯಾಗಿರುವಾಗ ನನ್ನ ಭಾಷೆ ಎಷ್ಟು ಸುಪುಷ್ಠ, ಎಷ್ಟು ವೈಚಾರಿಕ, ಎಷ್ಟು ವೈಜ್ಞಾನಿಕ, ಇವುಗಳನ್ನು ಹೇಗೆ ನಾವು ಕಾಪಾಡಿಕೊಳ್ಳತ್ತೇವೆ ಎಂಬುದು ಬಹಮುಖ್ಯ ಎಂದರು.
ದಾವಣಗೆರೆಯಲ್ಲಿ ಮಾತನಾಡಿದ ನಟ ಸುಚೇಂದ್ರ ಪ್ರಸಾದ್ ಪ್ರತ್ಯೇಕವಾಗಿ ನಾನು ಕೂಗುವುದಿಲ್ಲ, ಕೂಗುವುದರಿಂದ ಏನೂ ಸಾಧನೆ ಆಗಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿದೆ. ನಾವು ಕನ್ನಡವನ್ನು ಅನುಷ್ಠಾನಗೊಳಿಸಿದಾಗ, ಅಳವಡಿಸಿಕೊಂಡಾಗ ಮಾತ್ರ ಕನ್ನಡ ಭಾಷೆಗೆ ವಿಶೇಷ ಮನ್ನಣೆ ಇದೆ. ಕನ್ನಡ ಸಾಯುವುದಿಲ್ಲ ಕನ್ನಡ ಮಾತನಾಡದೆ ಇರುವವರು ಸತ್ತವರು. ಆದ್ದರಿಂದ ಕನ್ನಡ ಧೀಮಂತ ಭಾಷೆಯಾಗಿದೆ. ಕನ್ನಡವನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತೇವೋ ಅಷ್ಟರ ಮಟ್ಟಿಗೆ ಕನ್ನಡ ಭಾಷೆ ನಮಗೆ ದಕ್ಕುತ್ತದೆ. ಕರ್ನಾಟಕ ರಾಜ್ಯದಲ್ಲಿರುವವರು ಎಲ್ರೂ ಕನ್ನಡಿಗರೆಂದು ಮಾನ್ಯತೆ ಮಾಡ್ಬೇಕಾಗಿದೆ, ಅವರೆಲ್ಲಾರೂ ಕನ್ನಡಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ನಟ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಯಾವುದೇ ಫ್ರೂಪ್ ಕೊಡದೆ ಆರೋಪ ಮಾಡುತ್ತಿರುವುದು ಷಢ್ಯಂತ್ರ, ಮ್ಯಾಚ್ ಫಿಕ್ಸಿಂಗ್ ಅಷ್ಟೇ: ಸಚಿವ ಅಶ್ವತ್ಥ್ ನಾರಾಯಣ್