ಕರ್ನಾಟಕ

karnataka

ETV Bharat / state

ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಸಂಸದ ಜಿ.ಎಂ.ಸಿದ್ದೇಶ್ವರ್ - MP Siddheshwar talks about ministrial post at davanagere

ನಾನು‌ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಹಾಗೇನಾದ್ರು ಸಚಿವ ಸ್ಥಾನ ನೀಡಿದ್ರೆ ಮೋದಿಯವರು ಕೊಟ್ಟ ಖಾತೆಯನ್ನು ಅಲಂಕರಿಸುತ್ತೇನೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದ್ದಾರೆ.

MP Siddheshwar
ಸಂಸದ ಸಿದ್ದೇಶ್ವರ್

By

Published : Dec 2, 2020, 3:48 PM IST

ದಾವಣಗೆರೆ: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಕೇಂದ್ರದಿಂದ‌ ಸಚಿವ ಸ್ಥಾನ ಕೊಟ್ಟರೆ ಸ್ವೀಕರಿಸುತ್ತೇನೆ. ಇಲ್ಲ ಅಂದ್ರೆ ಲೋಕಸಭಾ ಸದಸ್ಯನಾಗಿ ಇರ್ತೀನಿ‌ ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಮಾಧ್ಯಮಗೋಷಷ್ಠಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿದರು

ಜಿಎಂ ಐಟಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು‌ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಹಾಗೇನಾದ್ರು ಸಚಿವ ಸ್ಥಾನ ನೀಡಿದ್ರೆ ಮೋದಿಯರು ಕೊಟ್ಟ ಖಾತೆಯನ್ನು ಅಲಂಕರಿಸುತ್ತೇನೆ. ನಾನು ಮಂತ್ರಿಗಿರಿಯ ಆಕಾಂಕ್ಷಿಯಲ್ಲ. ಮಂತ್ರಿಯಾದ್ರೆ ಬೇರೆ ರಾಜ್ಯಗಳನ್ನು‌ ಸುತ್ತಾಡಬೇಕಾಗುತ್ತದೆ. ಅದರ ಬದಲಿಗೆ ಲೋಕಸಭಾ ಸದಸ್ಯನಾಗಿಯೇ ಇದ್ದು, ತನ್ನ ಕ್ಷೇತ್ರದಲ್ಲಿ ಕೆಲಸ‌ ಮಾಡಿಕೊಂಡಿರುತ್ತೇನೆ ಎಂದರು.

ಮುಂದುವರಿದು ಮಾತನಾಡಿದ ಅವರು, ಮಂತ್ರಿಯಾಗುವ ಬದಲು ಇಲ್ಲಿಯೇ ಲೋಕಸಭಾ ಸದಸ್ಯನಾಗಿದ್ದು ಕೆಲಸ‌ ಮಾಡುವುದರಿಂದ ಮುಂದಿನ ಚುನಾವಣೆಗೆ ಸಹಾಯ ಆಗಲಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೋಷಣೆ ಮಾಡಿದ್ದೆ. ಆದ್ರೆ, ಪಕ್ಷದ ವರಿಷ್ಠರು ಹಾಗು ಕಾರ್ಯಕರ್ತರ ತೀರ್ಮಾನಕ್ಕಾಗಿ ಕಾದು ನೋಡುವೆ ಎಂದು ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸುಳಿವು ಬಿಟ್ಟುಕೊಟ್ಟರು.

ABOUT THE AUTHOR

...view details