ದಾವಣಗೆರೆ :ಕಳೆದ ಮೂರು ದಿನಗಳಿಂದ ಬೆಂಗಳೂರಿನ ನನ್ನ ಸರ್ಕಾರಿ ನಿವಾಸದಲ್ಲಿ ಹೋಂ ಕ್ವಾರಂಟೈನ್ನಲ್ಲಿರುವೆ. ನಿರಂತರ ಯೋಗ ಹಾಗೂ ವಾಯುವಿಹಾರ ಮಾಡುತ್ತಿದ್ದೇನೆ. ನನ್ನ ಆರೋಗ್ಯದಲ್ಲಿ ಚೇತರಿಕೆ ಕಾಣುತೊಡಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಆತ್ಮವಿಶ್ವಾಸ ಇದ್ದರೆ ಸಾವನ್ನೂ ಸಹ ಒಂದು ಕ್ಷಣ ತಡೆದು ನಿಲ್ಲಿಸಬಹುದು. ಮನುಕುಲಕ್ಕೆ ಮಾರಕವಾಗಿರುವ ಕೊರೊನಾ ಮಹಾಮಾರಿಯನ್ನು ಎದುರಿಸಲು ಮನುಷ್ಯನಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ನನ್ನ ಸರ್ಕಾರಿ ನಿವಾಸದಿಂದಲೇ ನನ್ನ ಆಪ್ತ ಸಹಾಯಕರ ಮೂಲಕ ನನ್ನ ಮತ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿರುವೆ.