ಕರ್ನಾಟಕ

karnataka

ETV Bharat / state

ಸಚಿವಸ್ಥಾನಕ್ಕಾಗಿ ರೆಸಾರ್ಟ್‌ ರಾಜಕಾರಣ ಮಾಡಲ್ವಂತೆ 'ಎಂಪಿಆರ್‌'.. - M P Renukacharya davangere news

ಇಷ್ಟು ದಿನ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎನ್ನುತ್ತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಈಗ ತಾವೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಆದರೆ, ಹಾದಿ ಬೀದಿಯಲ್ಲಿ ಸಚಿವಗಿರಿಗಾಗಿ ರಂಪಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Renukacharya
ಎಂ. ಪಿ. ರೇಣುಕಾಚಾರ್ಯ

By

Published : Dec 16, 2019, 9:40 PM IST

ದಾವಣಗೆರೆ: ಇಷ್ಟು ದಿನ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎನ್ನುತ್ತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಈಗ ತಾವೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಆದರೆ, ಹಾದಿ ಬೀದಿಯಲ್ಲಿ ಸಚಿವಗಿರಿಗಾಗಿ ರಂಪಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯ ಆರು ಶಾಸಕರಿದ್ದಾರೆ. ಯಾರಿಗಾದರು ಒಬ್ಬರಿಗೆ ನೀಡಬೇಕು.‌ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಯಾರಿಗೂ ನೀಡಿಲ್ಲ.‌ ಶ್ರೀರಾಮುಲುಗೆ ಕೊಟ್ಟಿದ್ದರೂ, ಮೂಲತಃ ಅವರು ಬಳ್ಳಾರಿಯವರು. ಹಾಗಾಗಿ ಈ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕು. ಈ ಬಗ್ಗೆ ಸಿಎಂ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ ಬೇಡ. ಒಂದೊಂದು ವರ್ಗಕ್ಕೆ ಡಿಸಿಎಂ ನೀಡುತ್ತಾ ಹೋದರೆ ಎಷ್ಟು ಮಂದಿಗೆ ನೀಡಲು ಸಾಧ್ಯ. ಬಿಜೆಪಿ ಪಕ್ಷ ಜಾತಿ ಓಲೈಕೆ ಮಾಡುವುದಿಲ್ಲ ಎಂದರು.

ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ನರೇಂದ್ರ ಮೋದಿ, ಅಮಿತ್ ಶಾ ಕಾರಣ. ಯಡಿಯೂರಪ್ಪ ಅಲ್ಲ ಎಂದಿದ್ದಾರೆ. ಆತ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ವೈ ಅಂತಾ ಜಪ ಮಾಡಿರಲಿಲ್ವಾ,, ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು. ಬಿಎಸ್‌ವೈ ಮಾಸ್ ಲೀಡರ್. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ABOUT THE AUTHOR

...view details