ದಾವಣಗೆರೆ : ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಬೇಸತ್ತ ಸಿಜೆ ಆಸ್ಪತ್ರೆ ವಾರ್ಡ್ ಬಾಯ್ 50ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಾರ್ಡ್‌ಬಾಯ್.. ತನ್ನ ಮಕ್ಕಳಿಗೂ ವಿಷ ಹಾಕಿದ್ರಾ!?
ಕೆಲಸದಿಂದ ಕಿತ್ತು ಹಾಕಿದ ಕಾರಣಕ್ಕೆ ಬೇಸತ್ತ ಸಿಜೆ ಆಸ್ಪತ್ರೆ ವಾರ್ಡ್‌ಬಾಯ್ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಲ್ಲದೆ ತನ್ನ ಮಕ್ಕಳಿಗೂ ಊಟದಲ್ಲಿ ವಿಷ ಹಾಕಿ ಮಕ್ಕಳನ್ನೂ ಕೊಲ್ಲಲು ಯತ್ನಸಿದ್ದಾನೆ.
ಸಿಜೆ ಆಸ್ಪತ್ರೆಯ ಗುತ್ತಿಗೆ ನೌಕರ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ ಹನ್ನೆರಡು ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಮದ್ಯ ಸೇವನೆ ಮಾಡಿ ಕರ್ತವ್ಯಕ್ಕೆ ಬರುತ್ತಿದ್ದ ಕಾರಣಕ್ಕೆ ಕಳೆದ ಮೂರು ತಿಂಗಳ ಹಿಂದೆ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇನ್ನೂ ತನ್ನ ಮಕ್ಕಳಿಗೂ ಊಟದಲ್ಲಿ ವಿಷ ಹಾಕಿ ಬಂದಿರುವುದಾಗಿ ಸಂತೋಷ್ ಹೇಳಿದ್ದಾನೆ. ಆತನ ಮನೆಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ.
ಪೂಜಾ ಸೆಕ್ಯುರಿಟಿ ಸರ್ವೀಸ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಸಂತೋಷ್ ವಿಪರೀತ ಮದ್ಯ ಸೇವನೆ ಮಾಡಿ ಕೆಲಸಕ್ಕೆ ಬಂದ ಕಾರಣ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ತನ್ನ ಚಾಳಿ ಮುಂದುವರಿಸಿದ್ದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲಾಗಿತ್ತು ಎಂಬುದು ಕಂಪನಿ ಹೇಳಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.