ದಾವಣಗೆರೆ: ಮೀಸಲಾತಿ ಮಿತಿ ಶೇ.50 ರಷ್ಟಿದ್ದು, ಅದನ್ನು ಹೆಚ್ಚಿಸಿದಾಗ ಮಾತ್ರ ಪ್ರತಿಯೊಂದು ಸಮಾಜಕ್ಕೂ ನ್ಯಾಯ ಸಿಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಾವು ಮುಂದೆ ಬರಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಇದೆ. ಹಲವು ಸಮಾಜಗಳಲ್ಲಿ ಮೀಸಲಾತಿಗಾಗಿ ಬೇಡಿಕೆಗಳಿವೆ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪನವರು ದಿಟ್ಟ ನಿಲುವು ತೆಗೆದುಕೊಳ್ಳಲಿದ್ದಾರೆ. ಅವಕಾಶ ಬಂದಾಗ ಚರ್ಚಿಸಿ ಮೀಸಲಾತಿ ಹೆಚ್ಚಿಸಬೇಕಾಗಿದೆ ಎಂದರು.