ದಾವಣಗೆರೆ: ಹಿಂದೂ ಮಹಾಗಣಪತಿ ನಿಮಜ್ಜನದ ಶೋಭಾಯಾತ್ರೆ ಶನಿವಾರ ಅದ್ಧೂರಿಯಾಗಿ ಜರುಗಿತು. 26 ದಿನಗಳ ಕಾಲ ಇರಿಸಿದ್ದ ಗಣೇಶನಿಗೆ ಅದ್ಧೂರಿಗೆ ಮೆರವಣಿಗೆ ಮಾಡುವ ಮೂಲಕ ನಿಮಜ್ಜನ ಮಾಡಲಾಯಿತು. ಇನ್ನು, ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತು. ಇದರಿಂದ ಇಡೀ ದಾವಣಗೆರೆ ಕೇಸರಿ ಅಲಂಕಾರದಿಂದ ಸಿಂಗಾರಗೊಂಡಿತ್ತು. ವಿಶೇಷ ಎಂದರೇ ಡಿಜೆ ಸದ್ದಿಗೆ ಯುವಕ, ಯುವತಿಯರು ಭರ್ಜರಿ ಸ್ಪೆಪ್ಗಳನ್ನು ಹಾಕಿದ್ದಾರೆ.
ಬೆಳಗ್ಗೆ 10.30 ಗಂಟೆಗೆ ಆರಂಭವಾದ ಶೋಭಾಯಾತ್ರೆ, ಹೈಸ್ಕೂಲ್ ಮೈದಾನದಿಂದ ಹೊರಟು, ಎವಿಕೆ ಕಾಲೇಜ್ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರೋಡ್ ಮೂಲಕ ಪಿಬಿ ರಸ್ತೆ ಸೇರಿ, ಅಲ್ಲಿಂದ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಮುಕ್ತಾಯವಾಯಿತು. ಇನ್ನು, ಶೋಭಯಾತ್ರೆಯಲ್ಲಿ ಹೆಜ್ಜೆ ಹಾಕಲು ಐದು ಡಿಜೆ ಹಾಗು ಕಲಾ ತಂಡಗಳ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಒಟ್ಟು ಐದು ಡಿಜೆ ವ್ಯವಸ್ಥೆ ಮಾಡಿದ್ದರಿಂದ ಯುವತಿಯರು ಭರ್ಜರಿ ಸ್ಟೆಪ್ ಹಾಕಿದರು.
ಹಿಂದೂ ಮಹಾಗಣಪತಿ ಟ್ರಸ್ಟ್(ರಿ) ವತಿಯಿಂದ ಪ್ರತಿಷ್ಠಾಪಿಸಿರುವ ಆರನೇ ವರ್ಷದ ಹಿಂದೂ ಮಹಾಗಣಪತಿಯ ನಿಮಜ್ಜನ ಶೋಭಾಯಾತ್ರೆ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಶೋಭಾಯಾತ್ರೆಯಲ್ಲಿ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಕೂಡ ಭಾಗಿಯಾಗಿದ್ದರು. ಎಂ ಪಿ ರೇಣುಕಾಚಾರ್ಯ ಶೋಭಾಯಾತ್ರೆಯಲ್ಲಿ ಜನರ ಮಧ್ಯೆ ಭರ್ಜರಿ ಸ್ಟೆಪ್ ಹಾಕಿದರು. ಬಳಿಕ ಕ್ರೇನ್ ಹತ್ತಿ ಪುನೀತ್ ರಾಜ್‍ಕುಮಾರ್ ಫೋಟೋ ಹಿಡಿದ ಅಭಿಮಾನಿಗಳತ್ತ ಪ್ರದರ್ಶಿಸಿದರು.