ದಾವಣಗೆರೆ :8 ಅಡಿ ಗಣಪತಿ ಮೂರ್ತಿಯನ್ನು ಪ್ರತಿಪ್ಠಾಪನೆ ವಿಚಾರವಾಗಿ ಜಿಲ್ಲಾಡಳಿತ ಮತ್ತು ಹಿಂದೂ ಮಹಾಗಣಪತಿ ಸಮಿತಿ ನಡುವೆ ನಡೆದ ಹಗ್ಗ-ಜಗ್ಗಾಟದಲ್ಲಿ ಕೊನೆಗೂ ಸಮಿತಿ ಗೆದ್ದಿದೆ. ಕೊನೆಗೂ ಗಣೇಶನನ್ನ ಸಮಿತಿ ಪ್ರತಿಷ್ಠಾಪನೆ ಮಾಡಿದೆ.
ಕೊನೆಗೂ ಗಣೇಶನನ್ನು ಪ್ರತಿಷ್ಠಾಪಿಸಿದ ಸಮಿತಿ ಸರ್ಕಾರ ನಿಯಮಗಳನ್ನು ಮೀರಿ 8 ಅಡಿ ಎತ್ತರದ ಗಣೇಶ ವಿಗ್ರಹ ಪ್ರತಿಪ್ಠಾಪಿಸಿ ಗಣೇಶೋತ್ಸವ ಆಚರಿಸಲು ಮುಂದಾಗಿದ್ದ ಹಿಂದೂ ಮಹಾಗಣಪತಿ ಸಮಿತಿ ಮತ್ತು ಜಿಲ್ಲಾಡಳಿತ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆದಿತ್ತು. ಸಂಜೆ ತನಕ ಗಣೇಶನನ್ನು ಪ್ರತಿಷ್ಠಾಪಿಸದೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಆದರೆ, ಇದೀಗ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದ ಸಮಿತಿಯವರು ಗಣಪನನ್ನು ಕೊನೆಗೂ ಪ್ರತಿಷ್ಠಾಪಿಸಿದ್ದಾರೆ. ಬೆಳಗ್ಗೆಯಿಂದ ಪ್ರತಿಷ್ಠಾಪನೆಗೆ ಅನುಮತಿ ನೀಡದ ಪೊಲೀಸರು ಹಾಗೂ ಸಮಿತಿ ನಡುವೆ ಸಾಕಷ್ಟು ವಾಗ್ವಾದ ಕೂಡ ನಡೆದಿತ್ತು.
ಇದರಿಂದ ಕೋಪಗೊಂಡ ಸಮಿತಿ ಸದಸ್ಯರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ಸಮಿತಿಯವರ ಒತ್ತಡಕ್ಕೆ ಮಣಿದು 8 ಅಡಿ ಗಣಪತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ ಅವಕಾಶ ಕೊಟ್ಟಿದೆ.
ಓದಿ: ಕರ್ನಾಟಕ ಕೋವಿಡ್ ವರದಿ : ರಾಜ್ಯದಲ್ಲಿ ಇಂದು 967 ಮಂದಿಗೆ ಕೋವಿಡ್, 10 ಸೋಂಕಿತರ ಸಾವು