ಹರಿಹರ:ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಆಗ್ರಹಿಸಿ ಹರಿಹರದ ಹಿಂದೂ ಜಾಗರಣ ವೇದಿಕೆಯಿಂದ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನವರಿಗೆ ಉಪ ತಹಶೀಲ್ದಾರ್ ಚೆನ್ನವೀರ ಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಮುಖಂಡರು ಸ್ವಾತಂತ್ರ್ಯ ಸಂಗ್ರಾಮದ ನೇತಾರಾ ಬಾಲಗಂಗಾಧರ ತಿಲಕ್ ರವರು ಇಡೀ ದೇಶವನ್ನು ಒಗ್ಗೂಡಿಸಿ ಸ್ವಾತಂತ್ರದ ಕಿಚ್ಚು ಹಚ್ಚಲು ಮನೆಯಲ್ಲಿದ್ದ ಗಣೇಶ ಹಬ್ಬದ ಆಚರಣೆಯನ್ನು ಸಾರ್ವಜನಿಕ ಗೊಳಿಸಿದರು.
ಜಾತಿ, ಪ್ರಾಂತ್ಯ, ಭಾಷೆ ಪಕ್ಷ ಮರೆತು ಏಕತೆ ಯಿಂದ ಒಂದುಗೂಡಿಸಿ ಕಳೆದ 125 ವರ್ಷಗಳಿಂದ ಈ ಗಣೇಶ ಹಬ್ಬದ ಸಂಪ್ರದಾಯವನ್ನು ದೇಶದ ಮೂಲೆ ಮೂಲಗಳಲ್ಲಿ ಪಸರಿಸಿದರು. ಧರ್ಮದ ರಕ್ಷಣೆಗೆ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿ ಅನೇಕ ಕಲಾವಿದರಿಗೆ ಪ್ರತಿಭೆಗಳಿಗೆ ಸಂಸ್ಕ್ರತಿಗೆ ವೇದಿಕೆಯಾಗಿದೆ ಇಂತಹ ಸಾರ್ವಜನಿಕ ಉತ್ಸವವನ್ನು ಈ ವರ್ಷ ಸರ್ಕಾರವು ಕೋವಿಡ್ 19 ಹಿನ್ನೆಲೆಯಲ್ಲಿ ಅನುಮತಿ ನೀಡದಿರುವುದು ಅತ್ಯಂತ ನೋವಿನ ಹಾಗೂ ಖಂಡನೀಯ ಎಂದರು.
ದೇಶದ ಜನರು ಕೋವಿಡ್ ವಿಷಯದಲ್ಲಿ ಜಾಗೃತರಿದ್ದು ನಿಯಮ ಮೀರಿ ವರ್ತಿಸುವುದಿಲ್ಲ ಅನ್ನುವುದು ತಮಗೆ ಗೊತ್ತಿದ್ದರೂ ಕೋವಿಡ್ ನೆಪಕ್ಕೆ ಪರಂಪರೆ, ಧಾರ್ಮಿಕ ಭಾವನೆ, ಶ್ರದ್ಧೆ ಯನ್ನು ಘಾಸಿಗೊಳಿಸಿದಂತಾಗುತ್ತದೆ.
ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದಾಗಲೂ ಈ ರೀತಿ ನಿಯಮಗಳು ಜಾರಿ ಮಾಡಿರಲಿಲ್ಲ. ಅಲ್ಲದೇ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಯಾವುದೇ ನಿರ್ಭಂದವಿಲ್ಲ ಎಂದರು.