ಕರ್ನಾಟಕ

karnataka

ETV Bharat / state

'ಅವ್ರು ಶಾಲು ಹಾಕಿ ಬಂದ್ರೇ ಪ್ರಾಬ್ಲಂ ಇಲ್ಲ.. ನಾವಂತೂ ಹಿಜಾಬ್‌ ಹಾಕಿಕೊಂಡೇ ಕಾಲೇಜಿಗೆ ಬರ್ತೇವೆ..' - MLA Renukacharya visited honnali college and discuss with students

ಉಡುಪಿ,ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಜಾಬ್​-ಕೇಸರಿ ಶಾಲು ವಿವಾದ ಭುಗಿಲೆದ್ದಿದೆ. ಅದರಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕಾಲೇಜಿನಲ್ಲಿ ವಿವಾದ ಉಂಟಾಗಿತ್ತು. ಇಂದು ಕಾಲೇಜಿಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದರು..

Hijab- Saffron Contravercy in Honnalli college
ದಾವಣಗೆರೆಯ ಹೊನ್ನಾಳಿ ಕಾಲೇಜಿನಲ್ಲಿ ಹಿಜಾಬ್​-ಕೇಸರಿ ಶಾಲು ವಿವಾದ

By

Published : Feb 7, 2022, 5:05 PM IST

ದಾವಣಗೆರೆ: ಜಿಲ್ಲೆಯ ಕಾಲೇಜೊಂದರಲ್ಲಿ ಹಿಜಾಬ್-ಕೇಸರಿಶಾಲು ವಿವಾದ ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

ವಿದ್ಯಾರ್ಥಿಯರ ಜೊತೆ ಮಾತುಕತೆ ನಡೆಸಿದ ಶಾಸಕ ಎಂ ಪಿ ರೇಣುಕಾಚಾರ್ಯ..

ಹೊನ್ನಾಳಿ ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಇಂದು ಶಾಸಕ ರೇಣುಕಾಚಾರ್ಯ ಅವರು ಭೇಟಿ ನೀಡಿದ್ದರು. ಈ ವೇಳೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಶಾಸಕರು, ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬನ್ನಿ. ಆದರೆ, ಹಿಜಾಬ್​​ ತೆಗೆದಿಟ್ಟು ತರಗತಿಯೊಳಗೆ ಹೋಗಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಇದಕ್ಕೆ ಉತ್ತಿರಿಸಿದ ವಿದ್ಯಾರ್ಥಿನಿಯರು, ನಾವು ಮೊದಲಿನಿಂದಲೂ ಹಿಜಾಬ್​ ಧರಿಸಿಕೊಂಡು ಕಾಲೇಜಿಗೆ ಬರುತ್ತಿದ್ದೇವೆ. ನಮ್ಮ ಹಿರಿಯ ವಿದ್ಯಾರ್ಥಿಗಳು ಕೂಡ ಇದೇ ರೀತಿ ಬರುತ್ತಿದ್ದರು. ಆಗ ಸಮಸ್ಯೆ ಇರಲಿಲ್ಲ. ಇದೀಗ ಸಮಸ್ಯೆ ಶುರುವಾಗಿದೆ. ನಾವು ಹಿಜಾಬ್​​ ಧರಿಸದಿದ್ದರೆ ಪೋಷಕರು ನಮ್ಮನ್ನು ಕಾಲೇಜಿಗೆ ಕಳುಹಿಸುವುದಿಲ್ಲ.

ನಾವು ಹಿಜಾಬ್‌ ಧರಿಸುವುದನ್ನು ಬಿಡಲ್ಲ. ಅವರು ಶಾಲು ಹಾಕಿಕೊಂಡು ಬರಲಿ, ನಮಗೇನು ಅಭ್ಯಂತರವಿಲ್ಲ. ನಾವು ಹಿಜಾಬ್ ಹಾಕಿಯೇ ಕಾಲೇಜಿಗೆ ಬರುತ್ತೇವೆ ಎಂದು ಸಮಾಜಾಯಿಷಿ ನೀಡಿದರು.

ಇದರಿಂದ ಕೋಪಗೊಂಡ ರೇಣುಕಾಚಾರ್ಯ, ನಾಳೆ ಬರುವ ಕೋರ್ಟ್​​ ಆದೇಶವನ್ನು ಪಾಲಿಸುವಂತೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ದಾವಣಗೆರೆಗೆ ಕಾಲಿಟ್ಟ ಹಿಜಾಬ್ - ಕೇಸರಿ ಶಾಲು ವಿವಾದ: ಏನ್ ಹೇಳ್ತಿದ್ದಾರೆ ಗೊತ್ತಾ ಮುಸ್ಲಿಂ ವಿದ್ಯಾರ್ಥಿಗಳು..

For All Latest Updates

TAGGED:

ABOUT THE AUTHOR

...view details