ದಾವಣಗೆರೆ:ಆಗೊಮ್ಮೆ ಈಗೊಮ್ಮೆ ಸುರಿಯುತ್ತಾ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆರಾಯ ಇಂದು ತುಸು ಜೋರಾಗಿ ಸುರಿದಿದ್ದು ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾನೆ.
ಬೆಣ್ಣೆನಗರಿಗೆ ಕೃಪೆ ತೋರಿದ ವರುಣ, ರೈತರಲ್ಲಿ ಹುರುಪು - ದಾವಣಗೆರೆಯಲ್ಲಿ ಮಳೆ, ಕೃಪೆ ತೋರಿದ ವರುಣ, ಜನರ ಮೊಗದಲ್ಲಿ ಮಂದಹಾಸ, ಈ ಟಿವಿ ಭಾರತ
ರಾಜ್ಯಾದ್ಯಂತ ಮಳೆಗಾಲ ಪ್ರಾರಂಭವಾಗಿದ್ದರೂ ದಾವಣಗೆರೆಯಲ್ಲಿ ಮಾತ್ರ ಇದುವರೆಗೂ ಮಳೆಯಾಗಿರಲಿಲ್ಲ. ಇಂದು ಜಿಲ್ಲೆಯಾದ್ಯಂತ ವರುಣ ತುಸು ಕೃಪೆ ತೋರಿದ್ದು ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೃಪೆ ತೋರಿದ ವರುಣ
ಜಿಲ್ಲೆಯ ಹಲವೆಡೆ ಮಧ್ಯಾಹ್ನ 3.30ರಿಂದ ಒಂದು ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ. ರಾಜ್ಯಾದ್ಯಂತ ಮಳೆಗಾಲ ಆರಂಭವಾಗಿದ್ದರೂ ಇದುವರೆಗೂ ದಾವಣಗೆರೆಗೆ ಮಳೆರಾಯ ಕೃಪೆ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ದುಗ್ಗಮ್ಮ ದೇವಸ್ಥಾನದ ಮುಂದೆ ಸಂತೆ ಮಾಡಲಾಗಿತ್ತು. ಮತ್ತು ಹಲವೆಡೆ ಪರ್ಜನ್ಯ ಹೋಮ ಹವನ ಮಾಡಲಾಗಿತ್ತು. ಕಾಕತಾಳೀಯ ಎಂಬಂತೆ ಇಂದು ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಮಳೆಯ ನಿರೀಕ್ಷಿಯಲ್ಲಿದ್ದ ಜನರಿಗೆ ಸಂತಸ ತಂದಿದೆ.