ದಾವಣಗೆರೆ: ತಾಲೂಕಿನ ಕತ್ತಲಗೆರೆ ನಿವಾಸಿ ಕವಿತಾ ಎಂಬುವರ ಪುತ್ರ ಹುಟ್ಟಿದಾಗಿನಿಂದ ತಲಸ್ಸೇಮಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ. ಇದೀಗ ಆತನಿಗೆ ಸಹೋದರಿಯ ಅಸ್ಥಿಮಜ್ಜೆಯನ್ನು ಅಳವಡಿಸಲಾಗಿದೆ. ತಮ್ಮನಿಗೆ ಅಕ್ಕನೇ ಮರುಜೀವ ನೀಡಿದ್ದಾಳೆ.
ಸಹೋದರನಿಗೆ ಮರುಜೀವ ನೀಡಿದ ಅಕ್ಕ....ತನ್ನ ಅಸ್ಥಿಮಜ್ಜೆಯನ್ನೇ ದಾನ ಮಾಡಿದ ಪ್ರಾಣ ಉಳಿಸಿದ ಬಾಲಕಿ ಈ ಕಾಯಿಲೆಗೆ, ಕೆಂಪು ರಕ್ತ ಉತ್ಪಾದನೆ ಕಡಿಮೆ ಇದ್ದು ನಾಲ್ಕು ವಾರಕ್ಕೊಮ್ಮೆ ರಕ್ತ ಹಾಕಿಸಿಕೊಳ್ಳಬೇಕಾಗುತ್ತದೆ. ರೋಗ ಉಲ್ಬಣವಾದರೆ ಮುಂದಿನ ದಿನಗಳಲ್ಲಿ ಲಿವರ್, ಹೃದಯಕ್ಕೆ ಹಾನಿ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ತಾಯಿ ಕವಿತ ಹಲವು ವೈದ್ಯರ ಬಳಿ ತೋರಿಸಿದ್ದು, ಅವರೆಲ್ಲ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿದ್ದರೆ ವಿನಃ ಕಾಯಿಲೆ ಗುಣಮುಖವಾಗುತ್ತೆ ಎಂಬ ಭರವಸೆ ನೀಡಿರಲಿಲ್ಲ.
ನಾರಾಯಣ ಹೃದಯಾಲಯದ ವೈದ್ಯ ಸುನೀಲ್ ಆಸ್ಪತ್ರೆಗೆ ಬಂದು ಬಾಲಕ ಹೇಮಂತನನ್ನು ಪರೀಕ್ಷೆ ಮಾಡಿದ್ದರು. ಅಷ್ಟೇ ಅಲ್ಲದೇ ತಲಸ್ಸೇಮಿಯಾವನ್ನು ಗುಣಪಡಿಸುವುದಾಗಿ ಭರವಸೆ ನೀಡಿ, ಕವಿತಾ ಅವರಿಗೆ ಮಗುವಿನೊಂದಿಗೆ ಆಸ್ಪತ್ರೆಯಲ್ಲೇ ಇರುವಂತೆ ಸೂಚನೆ ನೀಡಿದ್ದರು. ಅದರಂತೆ ಕವಿತಾ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಮಗನಿಗೆ ಕವಿತಾ ನಾಲ್ಕು ವಾರಕ್ಕೊಮ್ಮೆ ಒಂದು ಬಾಟಲ್ ರಕ್ತ ಹಾಕಿಸುತ್ತಿದ್ದರು. ಕೊನೆಗೆ ವೈದ್ಯ ಸುನೀಲ್ ಭಟ್ ಅವರು ಬಾಲಕನಿಗೆ ಆತನ ಅಕ್ಕ ನಮ್ರತಾಳ ಜೀನ್ ಪರೀಕ್ಷೆ ಮಾಡಿಸಿದ್ದು, ಅದು ಹೊಂದಿಕೆಯಾದ ಹಿನ್ನೆಲೆಯಲ್ಲಿ ಆಕೆಯ ಅಸ್ಥಿಮಜ್ಜೆಯನ್ನು ತೆಗೆದು ಹೇಮಂತ್ಗೆ ಅಳವಡಿಸಿದ್ದಾರೆ. ಇದೀಗ ಬಾಲಕ ಹೇಮಂತ ಹಾಗೂ ಆತನ ಅಕ್ಕ ನಮ್ರತಾ ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತಲಸ್ಸೇಮಿಯಾ ಮಾರಣಾಂತಿಕ ಕಾಯಿಲೆಯಲ್ಲ, ಸರಿಯಾದ ಚಿಕಿತ್ಸೆಯ ಮೂಲಕ ಅದನ್ನ ಗುಣಪಡಿಸಬಹುದು ಎಂದು ವೈದ್ಯರು ತೋರಿಸಿಕೊಟ್ಟಿದ್ದು, ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.