ಬೆಣ್ಣೆ ನಗರಿಯಲ್ಲಿ ಮುಂಗಾರು ಅಬ್ಬರ: ನೂರಾರು ಎಕರೆ ಕೃಷಿ ಭೂಮಿ ಜಲಾವೃತ, ಪರಿಹಾರಕ್ಕೆ ಮೊರೆ - ಜಗಳೂರು ತಾಲೂಕಿನಲ್ಲಿ ಮುಂಗಾರು ಮಳೆ
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಗೋಣಿವಾಡ ಕ್ಯಾಂಪ್, ಮತ್ತಿ, ಕತ್ತಲಗೆರೆ ಕಾರಿಗನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಬಿರುಗಾಳಿ ಮತ್ತು ಮಳೆಯಿಂದ ಬಡವರ ಮನೆಗಳು, ದೇವಸ್ಥಾನ, ಅಡಿಕೆ ತೋಟ, ತೆಂಗು, ಬಾಳೆ ಹಾಗೂ ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಹಾನಿಗೀಡಾಗಿವೆ.
![ಬೆಣ್ಣೆ ನಗರಿಯಲ್ಲಿ ಮುಂಗಾರು ಅಬ್ಬರ: ನೂರಾರು ಎಕರೆ ಕೃಷಿ ಭೂಮಿ ಜಲಾವೃತ, ಪರಿಹಾರಕ್ಕೆ ಮೊರೆ Heavy Rainfall at Davanagere](https://etvbharatimages.akamaized.net/etvbharat/prod-images/768-512-7441641-649-7441641-1591078846962.jpg)
ಬೆಣ್ಣೆ ನಗರಿಯಲ್ಲಿ ಆರ್ಭಟಿಸಿದ ಮುಂಗಾರು ಮಳೆ
ದಾವಣಗೆರೆ: ಜಗಳೂರು ತಾಲೂಕಿನಲ್ಲಿ ಮುಂಗಾರು ಮಳೆ ದೊಡ್ಡ ಪ್ರಮಾಣದಲ್ಲಿ ಸುರಿದಿದೆ. ಪರಿಣಾಮ, ತುಪ್ಪದಹಳ್ಳಿ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಮಳೆ ನೀರು ಹೆಮ್ಮನಬೇತೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಾಕಷ್ಟು ಹಾನಿ ಮಾಡಿದ್ದು, ನೂರಾರು ಎಕರೆ ಕೃಷಿ ಭೂಮಿ ನೀರಿನಿಂದ ಆವೃತವಾಗಿದೆ. ಊರೊಳಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಕಾರು, ಬೈಕ್‌ಗಳು ನೀರಿನಲ್ಲಿ ಮುಳುಗಿದ್ದ ದೃಶ್ಯ ಕಂಡು ಬಂತು.
ಬೆಣ್ಣೆ ನಗರಿಯಲ್ಲಿ ಆರ್ಭಟಿಸಿದ ಮುಂಗಾರು ಮಳೆ, ಅನ್ನದಾತರಿಗೆ ಸಂಕಷ್ಟ
ಲಾಕ್‌ಡೌನ್‌ನಿಂದಾಗಿ ಈಗಾಗಲೇ ರೈತರು ತಮ್ಮ ಫಸಲುಗಳಿಗೆ ಸೂಕ್ತ ರೀತಿಯ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಇದ್ರ ನಡುವೆ, ಮಳೆ ಅನ್ನದಾತರ ಬವಣೆಯನ್ನು ಮತ್ತಷ್ಟು ಹೆಚ್ಚಿಸಿದೆ.