ದಾವಣಗೆರೆ :ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ, ಕಮಲಾಪುರ, ಯಲವಟ್ಟಿ ಸೇರಿ ಹಲವು ಕಡೆ ಮಳೆ ಅವಾಂತರ ಸೃಷ್ಟಿಸಿದೆ.
ಮಳೆಯಿಂದಾಗಿ ರೈತರ ಜಮೀನುಗಳು ದ್ವೀಪದಂತಾಗಿವೆ. ಸಂಪೂರ್ಣ ಬೆಳೆಗಳು ಮುಳುಗಡೆಯಾಗಿವೆ. ಅಲ್ಲದೇ, ಅಡಿಕೆ, ಎಲೆಬಳ್ಳಿ, ಭತ್ತದ ಗದ್ದೆಗಳು ಮುಳುಗಡೆಯಾಗಿವೆ. ಅಡಿಕೆ ಹಾಗೂ ಎಲೆ ಬಳ್ಳಿಗಳು ಕೊಳೆಯುವ ಸ್ಥಿತಿಗೆ ತಲುಪಿವೆ.