ದಾವಣಗೆರೆ : ನಗರದಲ್ಲಿ ಇಂದು ಸತತವಾಗಿ ಮೂರು ಗಂಟೆಗಳ ಕಾಲ ಸುರಿದ ಮಳೆ ಜನರನ್ನು ಹೈರಾಣಾಗಿಸಿತು. ಕಳೆದ ಒಂದು ವಾರದಿಂದ ವಿರಾಮ ನೀಡಿದ್ದ ಮಳೆ ಇವತ್ತು ಧಾರಾಕಾರವಾಗಿ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯವಸ್ತಗೊಂಡಿತ್ತು.
ಬೆಣ್ಣೆ ನಗರಿಯಲ್ಲಿ ಅಬ್ಬರಿಸಿದ ಮಳೆರಾಯ.. ಮೂರು ಗಂಟೆ ಭರ್ಜರಿ ಮಳೆ - rain in davanagere
ದಾವಣಗೆರೆಯಲ್ಲಿ ಇಂದು ಸತತವಾಗಿ ಮೂರು ಗಂಟೆಗಳ ಕಾಲ ಸುರಿದ ಮಳೆ ಜನರನ್ನು ಹೈರಾಣಾಗಿಸಿತು. ಕಳೆದ ಒಂದು ವಾರದಿಂದ ವಿರಾಮ ನೀಡಿದ್ದ ಮಳೆ ಇವತ್ತು ಧಾರಾಕಾರವಾಗಿ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯವಸ್ತಗೊಂಡಿತ್ತು.
![ಬೆಣ್ಣೆ ನಗರಿಯಲ್ಲಿ ಅಬ್ಬರಿಸಿದ ಮಳೆರಾಯ.. ಮೂರು ಗಂಟೆ ಭರ್ಜರಿ ಮಳೆ](https://etvbharatimages.akamaized.net/etvbharat/prod-images/768-512-4172248-thumbnail-3x2-giri.jpg)
ಬೆಣ್ಣೆ ನಗರಿಯಲ್ಲಿ ಅಬ್ಬರಿಸಿದ ಮಳೆರಾಯ
ಬೆಣ್ಣೆನಗರಿಯಲ್ಲಿ ಅಬ್ಬರಿಸಿದ ಮಳೆರಾಯ..
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಪಿಬಿ ರಸ್ತೆ, ಮಂಡಿಪೇಟೆ, ಎಸ್‌ಪಿಎಸ್‌ನಗರ, ಹಳೆಯ ಬಿಎಸ್‌ಸಿ ನಗರ ಸೇರಿದಂತೆ ಹಲವೆಡೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡಿದರು. ಅಲ್ಲದೆ ಆಜಾದ್‌ನಗರ, ಕೆಟಿಜಿ ನಗರ ಸೇರಿದಂತೆ ಹಲವೆಡೆಯೂ ಮಳೆ ಸುರಿಯಿತು.
ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ, ಮಳೆ ಕಡಿಮೆಯಾದ ಪರಿಣಾಮ ಜನರು ನಿಟ್ಟುಸಿರುಬಿಟ್ಟರು. ನಗರದ ಬಹುಪಾಲು ರಸ್ತೆಗಳು ಜಲಾವೃತವಾಗಿದ್ದು, ಮಳೆ ನಿಲ್ಲುವ ತನಕ ಪ್ರಯಾಣಿಕರು ಪರದಾಡುವಂತಾಯಿತು. ಅಲ್ಲದೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ನೀರು ನಿಂತ ಪರಿಣಾಮ ದೂರದೂರಿಗೆ ಹೋಗುವ ಜನರು ಸ್ವಲ್ವ ಸಮಯ ಹೈರಾಣಾದರು.