ಹರಿಹರ: ಕಳೆದ ಎರಡು ದಿನಗಳಿಂದ ಹರಿಹರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಎರಡು ಗ್ರಾಮಗಳ ಸಂಪರ್ಕ ಸೇತುವೆ ಕಡಿತಗೊಂಡಿದ್ದು, ಸಾರ್ವಜನಿಕರು ಹಾಗೂ ರೈತರು ಜಮೀನುಗಳಿಗೆ ತೆರಳುವ ರಸ್ತೆ ನೀರಿನಿಂದ ಆವೃತವಾಗಿದೆ.
ಅಧಿಕ ಮಳೆಯಿಂದ ಕೊಚ್ಚಿ ಹೋದ ರಸ್ತೆ: ಕಳಪೆ ಕಾಮಗಾರಿ ಆರೋಪ - road that was washed away
ಹರಿಹರ ತಾಲೂಕಿನ ರಾಮತೀರ್ಥ ಹಾಗೂ ಬೆಳ್ಳೋಡಿ ಗ್ರಾಮಗಳ ನಡುವಿನ ಸೇತುವೆಯ ರಸ್ತೆ ಅಧಿಕ ಮಳೆಯಿಂದ ಕೊಚ್ಚಿ ಹೋಗಿದೆ.
ಹೌದು, ಹರಿಹರ ತಾಲೂಕಿನ ರಾಮತೀರ್ಥ ಹಾಗೂ ಬೆಳ್ಳೋಡಿ ಗ್ರಾಮಗಳ ನಡುವಿನ ಸೇತುವೆಯ ರಸ್ತೆ ಅಧಿಕ ಮಳೆಯಿಂದ ಕೊಚ್ಚಿ ಹೋಗಿದೆ. ನಿನ್ನೆಯಿಂದ ರಭಸವಾಗಿ ಹರಿಯುತ್ತಿರುವ ಹಳ್ಳದ ನೀರಿನಿಂದ ರಸ್ತೆ ಹಾಗೂ ಕಬ್ಬಿಣದ ತಡಗೋಡೆ ಕಿತ್ತು ಹೋಗಿದೆ. ಕಳೆದ ವರ್ಷವೂ ಇದೇ ಸಮಸ್ಯೆ ನಿರ್ಮಾಣವಾಗಿತ್ತು. ಈ ಸೇತುವೆಯ ಸಂಪರ್ಕ ರಸ್ತೆಯು ಕಳೆದ ಬಾರಿ ಅಧಿಕ ಮಳೆಗೆ ನೀರಿನ ಹರಿವಿನಿಂದ ರಸ್ತೆ ಕೊಚ್ಚಿ ಹೋಗಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ, ಕೂಡಲೇ ರಸ್ತೆ ನಿರ್ಮಾಣದ ಕಾಮಗಾರಿ ಮಾಡುವಂತೆ ಆದೇಶಿಸಿ ಗುತ್ತಿಗೆದಾರನಿಗೆ ಕೆಲಸ ನೀಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಈ ವರ್ಷವೂ ರಸ್ತೆ ಮತ್ತೆ ಕೊಚ್ಚಿ ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಸೂಳೆಕೆರೆ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಹಾಗೂ ರಸ್ತೆಯ ಮೇಲೆ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆ ನೀರಿನ ರಭಸಕ್ಕೆ ಕೊಚ್ಚಿ ಹೋದ ರಸ್ತೆಯನ್ನು ಅಧಿಕಾರಿಗಳು ವೀಕ್ಷಿಸಲಿದ್ದಾರೆ. ಈ ಹಿಂದೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.