ದಾವಣಗೆರೆ :ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಹಂತಕರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ ಹನುಮಂತರಾಯ ಹಂತಕರನ್ನು ಪತ್ತೆ ಹಚ್ಚಿದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪ್ರಕರಣ ಸಂಬಂಧ ಮಹಿಳೆಯ ಮೂವರು ಸಹೋದರರು ಹಾಗೂ ಅವರ ಸ್ನೇಹಿತನನ್ನು ಬಂಧಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹರಿಹರ ಪಟ್ಟಣದ ಬಸ್ ನಿಲ್ದಾಣದ ಬಳಿ ಮೃತದೇಹ ಸಿಕ್ಕಿತ್ತು. ಇದು ಮೇಲ್ನೋಟಕ್ಕೆ ಅನುಮಾನಾಸ್ಪದ ಸಾವು ಎಂಬುದು ಗೊತ್ತಾಗಿತ್ತು. ಈತ ಯಾರು ಎಂಬ ಬಗ್ಗೆ ವ್ಯಾಟ್ಸ್ಆ್ಯಪ್ ಹಾಗೂ ಸ್ಥಳೀಯರನ್ನು ವಿಚಾರಿಸಿದಾಗ ಪಂಚತಾರಾ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂಬುದು ಗೊತ್ತಾಗಿದೆ. ಬಳಿಕ ಆತನ ಕುಟುಂಬಸ್ಥರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಯಾರೆಂಬುದು ಗೊತ್ತಾಯಿತು. ಆತನ ಹೆಂಡತಿಯೇ ಈ ಬಗ್ಗೆ ದೂರು ಕೊಟ್ಟಿದ್ದು, ಈ ಆಧಾರದ ಮೇಲೆ ನಾಲ್ವರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
ದೊಡ್ಡಬಾತಿಯ ಹರೀಶ್ ಎಂಬಾತನ ತಲೆ ಮತ್ತು ಕೈ, ಕಾಲಿಗೆ ಸ್ವಲ್ಪ ಗಾಯವಾಗಿತ್ತು. ಆದ್ರೆ, ಆರೋಪಿಗಳು ದೈಹಿಕವಾಗಿ ಹಲ್ಲೆ ನಡೆಸಿ ಹತ್ಯೆ ನಡೆಸಿದ್ದಾರೆ. ರಾತ್ರಿ ಹೊತ್ತು ಮಹಿಳೆ ಜೊತೆ ಹರೀಶ್ ಇದ್ದದ್ದನ್ನು ನೋಡಿದವರು ಮಾಹಿತಿ ನೀಡಿದ ಮೇರೆಗೆ ಪ್ರಕರಣ ಭೇದಿಸಲು ಸಹಕಾರಿಯಾಗಿದೆ ಎಂದರು. ನಾಗರಾಜ್, ಮಾರುತಿ, ರಾಘವೇಂದ್ರ ಮಹಿಳೆಯ ಸಹೋದರರಾಗಿದ್ದಾರೆ. ಹರಿಹರ ಇನ್ಸ್ಪೆಕ್ಟರ್ ಈ ಪ್ರಕರಣ ಕುರಿತಂತೆ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.