ಕರ್ನಾಟಕ

karnataka

ETV Bharat / state

ವೈದ್ಯರು, ಪೊಲೀಸರಿಗೂ ಸಹ ಪ್ರೋತ್ಸಾಹ ಧನ ನೀಡಬೇಕು.. ಶಾಸಕ ಎಸ್.ರಾಮಪ್ಪ ಸಲಹೆ - davanagere district harihara taluk

ಜಿಲ್ಲೆಯಲ್ಲಿ ಬಹಳಷ್ಟು ಕೋವಿಡ್-19 ಕೇಸ್​ಗಳಿದ್ರೂ ನಮ್ಮ ಹರಿಹರದಲ್ಲಿ ಇರಲಿಲ್ಲ. ಆದರೆ, ಮೊನ್ನೆ ನಗರದ ಅಗಸರ ಬೀದಿಯಲ್ಲಿ ಹಾಗೂ ನಿನ್ನೆ ಏ ಕೆ ಕಾಲೋನಿಯಲ್ಲಿ ಕೇಸ್ ಪತ್ತೆಯಾಗಿವೆ. ಹೀಗಾಗಿ ಸಾರ್ವಜನಿಕರು ಮಾಸ್ಕ್​ಗಳನ್ನ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದಿರಿ..

harihara Mla ramappa satement
ವೈದ್ಯರು, ಪೊಲೀಸರಿಗೂ ಸಹ ಪ್ರೋತ್ಸಾಹ ಧನ ನೀಡಬೇಕು..ಶಾಸಕ ಎಸ್.ರಾಮಪ್ಪ ಸಲಹೆ

By

Published : Jun 24, 2020, 8:13 PM IST

ಹರಿಹರ (ದಾವಣಗೆರೆ) :ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನದಂತೆ ವೈದ್ಯರು ಮತ್ತು ಪೊಲೀಸರಿಗೂ ಸಹಾಯ ಧನ ನೀಡಬೇಕು ಎಂದು ಶಾಸಕ ಎಸ್.ರಾಮಪ್ಪ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ವೈದ್ಯರು, ಪೊಲೀಸರಿಗೂ ಸಹ ಪ್ರೋತ್ಸಾಹ ಧನ ನೀಡಬೇಕು.. ಶಾಸಕ ಎಸ್.ರಾಮಪ್ಪ ಸಲಹೆ

ನಗರದ ಗುರುಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಉತ್ತಮವಾದ ಎನ್-95 ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್‌ಗಳನ್ನು ವಿತರಿಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಕೂಡಲೇ ಅವರಿಗೆ ವಿತರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಬಹಳಷ್ಟು ಕೋವಿಡ್-19 ಕೇಸ್​ಗಳಿದ್ದರೂ ಸಹ ನಮ್ಮ ಹರಿಹರದಲ್ಲಿ ಇರಲಿಲ್ಲ. ಆದರೆ, ಮೊನ್ನೆ ನಗರದ ಅಗಸರ ಬೀದಿಯಲ್ಲಿ ಹಾಗೂ ನಿನ್ನೆ ಏ ಕೆ ಕಾಲೋನಿಯಲ್ಲಿ ಕೇಸ್ ಪತ್ತೆಯಾಗಿವೆ. ಹೀಗಾಗಿ ಸಾರ್ವಜನಿಕರು ಮಾಸ್ಕ್​ಗಳನ್ನ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದಿರಿ ಎಂದು ಮನವಿ ಮಾಡಿದರು.

ಕೊರೊನಾ ವಾಸಿಯಾಗದಂತಹ ಕಾಯಿಲೆಯೇನಲ್ಲ. ನೂರಕ್ಕೆ ತೊಂಬತ್ತರಷ್ಟು ಕಾಯಿಲೆ ವಾಸಿಯಾಗುತ್ತದೆ, ಅದರ ಬಗ್ಗೆ ಭಯ ಬೇಡ. ಸಾರ್ವಜನಿಕರು ತಮಗೆ ಅನುಮಾನ ಬಂದ ತಕ್ಷಣ ವೈದ್ಯರ ಬಳಿ ಹೋಗಿ ಸರಿಯಾದ ತಪಾಸಣೆ ಮಾಡಿಸಿ ಎಂದರು.

ABOUT THE AUTHOR

...view details