ಕರ್ನಾಟಕ

karnataka

ETV Bharat / state

ಹರಿಹರದ ಮಹಾತ್ಮ ಗಾಂಧಿ ಕ್ರೀಡಾಂಗಣ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ಆರಂಭ

ಕೆಲವರು ವಾಣಿಜ್ಯ, ವ್ಯಾಪಾರಕ್ಕೆ ಮಾತ್ರ ಬಳಕೆ ಮಾಡದೆ ಗೋದಾಮುಗಳನ್ನು ಮಾಡಿಕೊಂಡ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಇಲಾಖೆಯ ಗಮನಕ್ಕೆ ಇದ್ದರೂ ಸಹ ಕಂಡು ಕಾಣದಂತೆ ಕುಳಿತಿರುವುದು ಜನರಲ್ಲಿ ಅನುಮಾನ ಮೂಡಿಸಿತ್ತು..

Harihara
Harihara

By

Published : Sep 21, 2020, 9:20 PM IST

ಹರಿಹರ :ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಳಿಗೆಗಳನ್ನು ಅಳತೆ ಮಾಡಿ ಹೊಸ ದರ ನಿಗದಿ ಮಾಡಲು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲಾಗಿದೆ. ಇದರಿಂದ ನೆಲಮಹಡಿಯ ಬಾಡಿಗೆದಾರರಿಗೂ ತಳಮಳ ಆರಂಭವಾಗಿದೆ.

ನಗರದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗ 2001ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸುಮಾರು 26 ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ಆಧಾರದ ಮೇಲೆ ನೀಡಲಾಗಿತ್ತು. ಕಳೆದ 19 ವರ್ಷಗಳಿಂದ ಕೆಲವು ಶ್ರೀಮಂತ ವರ್ತಕರ ಹಿಡಿತದಲ್ಲಿರುವ ಮಳಿಗೆಗಳು, ಅವರ ಸ್ವಂತ ಮಳಿಗೆಗಳಂತೆ ಬಹುತೇಕ ಬಾಡಿಗೆದಾರರು ಕರಾರಿನಲ್ಲಿರುವ ನಿಯಮಗಳನ್ನು ಗಾಳಿಗೆ ತೋರಿ ತಮ್ಮ ಮನ ಬಂದಂತೆ ವಹಿವಾಟು ನಡೆಸುತ್ತಿರುವ ಆರೋಪಗಳು ಕೇಳಿ ಬರುತ್ತಿತ್ತು.

ಮಳಿಗೆಗಳನ್ನು ಹರಾಜಿನಲ್ಲಿ ಪಡೆದವರು ಮಾತ್ರ ವ್ಯಾಪಾರ, ವಹಿವಾಟು ನಡೆಸಬೇಕು. ನಿಯಮವಿದ್ದರೂ ಕೂಡ ಇಲ್ಲಿನ ಬಾಡಿಗೆದಾರರು ಮತ್ತೊಬ್ಬರಿಗೆ ದುಪಟ್ಟು ಬಾಡಿಗೆಗೆ ನೀಡಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ವಾಣಿಜ್ಯ, ವ್ಯಾಪಾರಕ್ಕೆ ಮಾತ್ರ ಬಳಕೆ ಮಾಡದೆ ಗೋದಾಮುಗಳನ್ನು ಮಾಡಿಕೊಂಡ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಇಲಾಖೆಯ ಗಮನಕ್ಕೆ ಇದ್ದರೂ ಸಹ ಕಂಡು ಕಾಣದಂತೆ ಕುಳಿತಿರುವುದು ಜನರಲ್ಲಿ ಅನುಮಾನ ಮೂಡಿಸಿತ್ತು.

ಅಲ್ಲದೆ ರೋಸ್ಟರ್ ಪದ್ಧತಿಯಲ್ಲಿ ಮಳಿಗೆ ಹಂಚಿಕೆ ಮಾಡುವ ಸದುದ್ದೇಶದಿಂದ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ಆರಂಭವಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಳಿಗೆಗಳನ್ನು ಅಳತೆ ಮಾಡಿ ಹೊಸ ದರ ನಿಗದಿ ಮಾಡಲು ಕಳೆದ ಜೂನ್‌ 16ರಂದು ಹರಿಹರ ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲಾಗಿದೆ. ಅಧಿಕಾರಿಗಳು ಮಳಿಗೆಗಳನ್ನು ಅಳತೆ ಮಾಡಿ ವರದಿಯನ್ನು ಜಿಲ್ಲಾಕ್ರೀಡಾ ಇಲಾಖೆಗೆ ಸಲ್ಲಿಸಬೇಕಾಗಿರುವುದು ಮಾತ್ರ ಬಾಕಿ ಇದೆ.

ಮಳಿಗೆಗಳ ಉಳಿಸಿಕೊಳ್ಳುವ ಕಸರತ್ತು: ಮಳಿಗೆ ಉಳಿಸಿಕೊಳ್ಳಲು ಬಾಡಿಗೆದಾರರು ಕಸರತ್ತು ನಡೆಸಿದ್ದು, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮೂಲಕ ಒಳ ಒಪ್ಪಂದ ಮಾಡಿಕೊಂಡು ಮಳಿಗೆಗಳನ್ನು ತಮ್ಮ ಸುಪರ್ದಿಯಲ್ಲಿ ಉಳಿಸಿಕೊಳ್ಳಲು ತೆರೆಮರೆ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details