ದಾವಣಗೆರೆ: ಗುತ್ತಿಗೆದಾರನಿಗೆ ಕಾಮಗಾರಿ ಮಂಜೂರಾತಿ ನೀಡುವುದಕ್ಕೆ ಲಂಚ ಪಡೆಯುತ್ತಿದ್ದ ವೇಳೆ ಹರಿಹರ ಬೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕರಿಬಸಯ್ಯ ಲೋಕಾಯುಕ್ತರ ಬಲೆಗೆ ಬಿದ್ದವರು.
ಹರಿಹರದ ತುಂಗಭದ್ರಾ ನದಿ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಬಲೆಗೆ ಬೀಳಿಸಿದ್ದಾರೆ. ಒಂದು ಫೈಲ್ಗೆ ಐದು ಸಾವಿರ ಅಂತಾ 15 ಸಾವಿರ ರೂ ಕರಿಬಸಯ್ಯನವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಒಂಬತ್ತು ಸಾವಿರ ರೂಪಾಯಿ ಪಡೆದಿದ್ದ ಇಂಜಿನಿಯರ್ ಕರಿಬಸಯ್ಯನವರು, ಇನ್ನುಳಿದ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ದಿಢೀರ್ ದಾಳಿ: ಕೆಇಬಿ ಗುತ್ತಿಗೆದಾರ ಬೇವಿನಹಳ್ಳಿ ಮಹೇಶ್ವರಪ್ಪ ಅವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿ, ಭ್ರಷ್ಟ ಅಧಿಕಾರಿಯವರನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಆಂಜನೇಯ ತಂಡವೂ ದಾಳಿ ಮಾಡಿತ್ತು. ಎಂಜನಿಯರ್ ಕರಿಬಸಯ್ಯನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
ಲೋಕಾದಾಳಿ ಇನ್ನುಳಿದ ಇಲಾಖೆ ಅಧಿಕಾರಿಗಳಲ್ಲೂ ನಡುಕ: ಹರಿಹರ ಬೆಸ್ಕಾಂ ಎಂಜಿನಿಯರ್ ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಂತೆ ತಾಲೂಕಿನ ಇನ್ನುಳಿದ ಇಲಾಖೆಗಳ ಅಧಿಕಾರಿಗಳಲ್ಲಿ ನಡುಕು ಉಂಟಾಗಿದೆ. ತಾಲೂಕಿನ ಇನ್ನುಳಿದ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಹಿಳೆ ಪೊಟೋ ತೆಗೆದು ಬ್ಲಾಕ್‌ಮೇಲ್ 10 ಲಕ್ಷ ರೂ ಬೇಡಿಕೆ:ದೂರು ದಾಖಲು