ದಾವಣಗೆರೆ :ಜಿಲ್ಲೆಯಲ್ಲಿ 144 ಸೆಕ್ಷನ್ ಇದ್ದರೂ ಅದ್ಧೂರಿಯಾಗಿ ರಥೋತ್ಸವ ನೆರವೇರಿತು. ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಭಾಗಿಯಾದರು.
ಹೊನ್ನಾಳಿ ತಾಲೂಕಿನ ರಾಂಪುರದ ಹಾಲಸ್ವಾಮಿ ರಥೋತ್ಸವ ಹೊನ್ನಾಳಿ ತಾಲೂಕಿನ ರಾಂಪುರದ ಹಾಲಸ್ವಾಮಿ ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿತು. ಇವತ್ತು ರಾತ್ರಿ 12 ಗಂಟೆಯವರೆಗೂ 144 ಸೆಕ್ಷನ್ ಜಿಲ್ಲಾದ್ಯಂತ ಜಾರಿ ಇದ್ದರೂ ಕೂಡ ಅದ್ಧೂರಿಯಾಗಿ ರಥೋತ್ಸವ ಆಚರಿಸಿದರು.
ಶಾಸಕ ರೇಣುಕಾಚಾರ್ಯ ಎತ್ತಿನ ಗಾಡಿಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕಿನ ಮಾಸಡಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸಿ ಗಮನ ಸೆಳೆದರು. ಈ ವೇಳೆ ರೇಣುಕಾಚಾರ್ಯರಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ಇದನ್ನೂ ಓದಿ:Watch video: ಜೀಪ್ ಅಟ್ಟಾಡಿಸಿಕೊಂಡು ಬಂದು ಸಫಾರಿಗರನ್ನ ಬೆಚ್ಚಿಬೀಳಿಸಿದ ಗಜರಾಜ