ದಾವಣಗೆರೆ:ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಬೆಳೆ ಸಮೀಕ್ಷೆ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸಚಿವರು ಆಗಮಿಸುತ್ತಿದ್ದಂತೆ ಸಾಮಾಜಿಕ ಅಂತರ ಮಾಯವಾಗಿದ್ದು ಕಂಡು ಬಂತು.
ಉತ್ಸವಕ್ಕೆ ಚಾಲನೆ ನೀಡಲು ಬರುತ್ತಿದ್ದಂತೆ ರೈತರು ಸಚಿವರನ್ನು ಮುತ್ತಿಕೊಂಡರು. ಇದರಿಂದ ಅಧಿಕಾರಿಗಳು ಸಚಿವರ ಹತ್ತಿರ ಬರಲು ಪರದಾಡಬೇಕಾಯಿತು. ಸಚಿವರು ಈಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಂದಿದ್ದರು. ಈ ಬಗ್ಗೆ ಗೊತ್ತಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರು, ಅವರನ್ನು ಮುತ್ತಿಕೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಮುರಿದರು.