ಕರ್ನಾಟಕ

karnataka

ETV Bharat / state

ಸ್ವಾಮಿ ನನ್ಗೆ ಯಾರೂ ಇಲ್ಲ, ಮಕ್ಳೂ ಇಲ್ಲ, ಒಂದು ಮನೆ ಕಟ್ಸ್ ಕೊಡ್ರಪ್ಪ: ಅಜ್ಜಿಯ ರೋಧನೆ - ದಾವಣಗೆರೆಯಲ್ಲಿ ಧಾರಾಕಾರ ಮಳೆ

ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ 90 ವರ್ಷದ ವೃದ್ಧೆ ಚಿನ್ನಮ್ಮ ಸುರಿಯುವ ಮಳೆಯಲ್ಲೇ ಸಣ್ಣದಾದ ಚಾಪೆ ತಲೆ ಮೇಲೆ ಹಾಕ್ಕೊಂಡು ದಿನ ದೂಡುತ್ತಿದ್ದು ಮನೆ ದುರಸ್ತಿ ಮಾಡಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

Chinnamma
ವೃದ್ಧೆ ಚಿನ್ನಮ್ಮ

By

Published : Aug 11, 2020, 6:46 PM IST

ದಾವಣಗೆರೆ:ಸ್ವಾಮಿ ನನ್ಗೆ ಯಾರೂ ಇಲ್ಲ‌. ಮಕ್ಳೂ ಇಲ್ಲ. ಮನೆಯೂ ಇಲ್ಲ. ಬೇರೆಯವರ ಮನೆಯೊಳಗೆ ಇರಂಗಿಲ್ಲ. ಮಳೆ ಬರ್ತಿದೆ...ಯಪ್ಪಾ...ಹೆಂಗಪ್ಪಾ ಇರೋದು ಈ ಮಳೇಲಿ ನಾನು. ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ 90 ವರ್ಷದ ವೃದ್ಧೆ ಚಿನ್ನಮ್ಮನ ರೋಧಿಸಿದ ಪರಿ ಇದು.

ವೃದ್ಧೆ ಚಿನ್ನಮ್ಮ

ಗ್ರಾಮದಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದೆ. ಸುರಿಯುವ ಮಳೆಯಲ್ಲೂ ಸಣ್ಣದಾದ ಚಾಪೆ ತಲೆ ಮೇಲೆ ಹಾಕ್ಕೊಂಡು ಇರುವುದನ್ನು ನೋಡಿದರೆ ಕರುಳು ಚುರುಕ್ ಎನ್ನುತ್ತದೆ. ಮಕ್ಕಳು, ಸಂಬಂಧಿಕರು ಅಜ್ಜಿಯ ನೆರವಿಗೆ ಬಂದಿಲ್ಲ. ಹಾಗೆಯೇ, ಅಲ್ಲಿಯೇ ಹತ್ತಿರದ ನಿವಾಸಿಯೊಬ್ಬರು ಮನೆಯ ಮುಂದೆ ಚಿನ್ನಮ್ಮ ಕುಳಿತಿದ್ದಾರೆ. ಅಕ್ಕಪಕ್ಕದ ಮನೆಯವರು ಅಜ್ಜಿಗೆ ಊಟ ನೀಡುತ್ತಿದ್ದು, ಚಿಕ್ಕದಾದ ಒಂದು ಮನೆಯನ್ನಾದರೂ ಕಟ್ಟಿಸಿಕೊಡುವಂತೆ ಗ್ರಾ.ಪಂ.ಗೆ ವೃದ್ಧೆ ಮನವಿ ಮಾಡಿದ್ದಾರೆ.

ABOUT THE AUTHOR

...view details