ಕರ್ನಾಟಕ

karnataka

ETV Bharat / state

ದಾವಣಗೆರೆ: ರೇಣುಕಾಚಾರ್ಯ ಹುಟ್ಟುಹಬ್ಬಕ್ಕೆ ಆಗಮಿಸಿದ ವಿಜಯೇಂದ್ರಗೆ ಅದ್ಧೂರಿ ಸ್ವಾಗತ - ಎಂಪಿ ರೇಣುಕಾಚಾರ್ಯ ಹುಟ್ಟುಹಬ್ಬ

ಹೊನ್ನಾಳಿ ಪಟ್ಟಣದ ಸಂತೆ ಮೈದಾನದಲ್ಲಿ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭಕ್ಕೆ ತೆರಳುವ ವೇಳೆ ಒಂದೇ ಕಾರಿನಲ್ಲಿ ತೆರಳಲು ಸಚಿವ ಭೈರತಿ ಬಸವರಾಜ್ ಬಿ.ವೈ ವಿಜಯೇಂದ್ರ ಅವರಿಗೆ ಮನವಿ ಮಾಡಿದರು. ‘ಅಣ್ಣೋ ಬಾರಣ್ಣೋ ನನ್ನ ಕಾರಿನಲ್ಲಿ ಹೋಗೋಣ’ ಎಂದು ಕರೆದಿದ್ದು, ಒಂದೇ ಕಾರಿನಲ್ಲಿ ತೆರಳಿದ್ದು ವಿಶೇಷವಾಗಿತ್ತು.

grand-welcome-to-vijayendra-who-arrived-at-renukacharyas-birthday
ರೇಣುಕಾಚಾರ್ಯ ಹುಟ್ಟುಹಬ್ಬಕ್ಕೆ ಆಗಮಿಸಿದ ವಿಜಯೇಂದ್ರಗೆ ಅದ್ದೂರಿ ಸ್ವಾಗತ

By

Published : Mar 1, 2021, 7:04 PM IST

ದಾವಣಗೆರೆ: ಹೊನ್ನಾಳಿ ಪಟ್ಟಣಕ್ಕೆ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬ ಹಿನ್ನೆಲೆ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ಅವರಿಗೆ ಹೂಮಳೆ ಸುರಿಸಿ, ಬೃಹತ್ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತ ಕೋರಲಾಯಿತು.

ದಾವಣಗೆರೆ: ರೇಣುಕಾಚಾರ್ಯ ಹುಟ್ಟುಹಬ್ಬಕ್ಕೆ ಆಗಮಿಸಿದ ವಿಜಯೇಂದ್ರಗೆ ಅದ್ದೂರಿ ಸ್ವಾಗತ

ಇದೇ ವೇಳೆ, ಹೊನ್ನಾಳಿ ಪಟ್ಟಣದ ಸಂತೆ ಮೈದಾನದಲ್ಲಿ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭಕ್ಕೆ ತೆರಳುವ ವೇಳೆ ಒಂದೇ ಕಾರಿನಲ್ಲಿ ತೆರಳಲು ಸಚಿವ ಭೈರತಿ ಬಸವರಾಜ್ ಬಿ.ವೈ ವಿಜಯೇಂದ್ರ ಅವರಿಗೆ ಮನವಿ ಮಾಡಿದರು. ‘ಅಣ್ಣೋ ಬಾರಣ್ಣೋ ನನ್ನ ಕಾರಿನಲ್ಲಿ ಹೋಗೊಣ’ ಎಂದು ಕರೆದರು. ಅವರ ಮನವಿಗೆ ಸ್ಪಂದಿಸಿದ ವಿಜೇಂದ್ರ ಸಚಿವರ ಕಾರಿನಲ್ಲೇ ತೆರಳಿ ಗಮನ ಸೆಳೆದರು.

ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸಂಸದ ಜಿಎಂ‌ ಸಿದ್ದೇಶ್ವರ್ , ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೊತೆಗಿದ್ದರು.

ಇದನ್ನೂ ಓದಿ:ಹೊನ್ನಾಳಿ ಶಾಸಕ ರೇಣುಕಾಚಾರ್ಯ ಜನ್ಮದಿನ ಸಂಭ್ರಮ: ಅಭಿಮಾನಿಗಳಿಂದ ಕ್ಷೀರಾಭಿಷೇಕ

ABOUT THE AUTHOR

...view details