ದಾವಣಗೆರೆ: ದೇಶ ಸೇವೆ ಮಾಡಿ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗು ಎಸ್ಪಿ ಸಿ.ಬಿ ರಿಷ್ಯಂತ್ ಆತ್ಮೀಯ ಸ್ವಾಗತ ಕೋರಿದರು.
ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಯೋಧ ಸುರೇಶ್ ರಾವ್ ಘೋರ್ಪಡೆಗೆ ಹೂವಿನ ಗುಚ್ಛ ನೀಡಿ ಶಾಲು ಹಾಕಿ ಸ್ವಾಗತಿಸಲಾಯಿತು. 21 ವರ್ಷದ ಸೇವೆಯ ಬಳಿಕ ನಿವೃತ್ತಿ ಹೊಂದಿ ಸ್ವಂತ ಗ್ರಾಮ ತೋಳಹುಣಸೆಗೆ ಅವರು ವಾಪಸ್ಸಾಗಿದ್ದಾರೆ. ಯೋಧನನ್ನು ತೆರೆದ ವಾಹನದಲ್ಲಿ ನಗರದಾದ್ಯಂತ ಮೆರವಣಿಗೆ ಮಾಡಲಾಯಿತು.