ಕರ್ನಾಟಕ

karnataka

ETV Bharat / state

ದೇಶ ಸೇವೆ ಬಳಿಕ ತವರಿಗೆ ಮರಳಿದ ಯೋಧ.. ಅದ್ದೂರಿಯಾಗಿ ಬರಮಾಡಿಕೊಂಡ ದಾವಣಗೆರೆ ಮಂದಿ - ತವರಿಗೆ ಮರಳಿದ ಯೋಧ‌

1996 ರಲ್ಲಿ ಸೇವೆಗೆ ಸೇರಿದ್ದ ಯೋಧ ಚಂದ್ರಪ್ಪ ಅವರು ಜಮ್ಮು ಕಾಶ್ಮೀರ, ಅಸ್ಸೋಂ, ಹೈದರಾಬಾದ್ ಹಾಗೂ ಛತ್ತೀಸ್‌ಗಡದಲ್ಲಿ ಸಿವಿಲ್ ಪೋಸ್ಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.

grand-welcome-to-soldier
ತವರಿಗೆ ಮರಳಿದ ಯೋಧನ ಅದ್ದೂರಿಯಾಗಿ ಬರಮಾಡಿಕೊಂಡ ದಾವಣಗೆರೆ ಮಂದಿ

By

Published : Sep 3, 2022, 1:41 PM IST

Updated : Sep 3, 2022, 2:32 PM IST

ದಾವಣಗೆರೆ: ತವರಿಗೆ ಮರಳಿದ ಯೋಧನನ್ನು ದಾವಣಗೆರೆ ಮಂದಿ ಅದ್ದೂರಿಯಾಗಿ ಸ್ವಾಗತಿಸಿದರು. 27 ವರ್ಷಗಳ ಕಾಲ ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್) ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಯೋಧ‌ ಕಾವಡಿ ಚಂದ್ರಪ್ಪ ಅವರನ್ನು ಮಾಜಿ ಸೈನಿಕರು ಹಾಗೂ ಅಭಿಮಾನಿಗಳು ರೈಲು ನಿಲ್ದಾಣದಲ್ಲಿ ಸ್ವಾಗತಿಸಿದರು.

ಚಂದ್ರಪ್ಪ ಕಾವಡಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದ ಚಿನ್ನಪ್ಪ ಹಾಗೂ ಲಕ್ಷಮ್ಮ ದಂಪತಿಯ ಪುತ್ರರಾಗಿದ್ದು, 1996 ರಲ್ಲಿ ಸೇವೆಗೆ ಸೇರಿದ್ದರು. ಯೋಧ ಚಂದ್ರಪ್ಪ ಅವರು ಜಮ್ಮುಕಾಶ್ಮೀರ, ಅಸ್ಸೋಂ, ಹೈದರಾಬಾದ್ ಹಾಗೂ ಛತ್ತೀಸ್‌ಗಡದಲ್ಲಿ ಸಿವಿಲ್ ಪೋಸ್ಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ದೇಶಕ್ಕಾಗಿ ಸೇವೆ ಸಲ್ಲಿಸಿ ತವರಿಗೆ ಮರಳಿದ ಚಂದ್ರಪ್ಪ ಅವರನ್ನು ರೈಲ್ವೆ ನಿಲ್ದಾಣದಿಂದ ತೆರೆದ ಜೀಪಿನಲ್ಲಿ ದಾವಣಗೆರೆ ನಗರದಾದ್ಯಂತ ಮೆರವಣಿಗೆ ಮಾಡಿ ಶ್ರೀರಾಮ ಬಡಾವಣೆಯ ಅವರ ನಿವಾಸಕ್ಕೆ ಕರೆತರಲಾಯಿತು.

ತವರಿಗೆ ಮರಳಿದ ಯೋಧನ ಅದ್ದೂರಿಯಾಗಿ ಬರಮಾಡಿಕೊಂಡ ದಾವಣಗೆರೆ ಮಂದಿ

ಇದಲ್ಲದೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವ ಚಂದ್ರಪ್ಪ ಅವರು 27 ವರ್ಷ ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್)ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಹಿಂತಿರುಗಿದ್ದಾರೆ. ಈ ವೇಳೆ ಯೋಧ ಕಾವಡಿ ಚಂದ್ರಪ್ಪ ಪ್ರತಿಕ್ರಿಯಿಸಿ, ಮೊದಲಿನಿಂದಲೂ ದೇಶ ಸೇವೆ ಮಾಡುವ ಹಂಬಲವಿತ್ತು. ಇಷ್ಟಪಟ್ಟು ಸೇನೆಗೆ ಸೇರಿದೆ. ಕಾಶ್ಮೀರದಲ್ಲಿ ಬಾಂಬ್ ದಾಳಿಯಾದಾಗ ಕಣ್ಣೆದುರಿಗೆ ಸ್ನೇಹಿತ ಹುತಾತ್ಮನಾದ. ತಾವು ಆಗ ದಾಳಿಯಿಂದ ಪಾರಾದ ಸಂಗತಿಯನ್ನು ನೆನೆದರು.

ಇದನ್ನೂ ಓದಿ:ಚಿಕ್ಕಮಗಳೂರು: ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

Last Updated : Sep 3, 2022, 2:32 PM IST

ABOUT THE AUTHOR

...view details