ದಾವಣಗೆರೆ: ತಳಮಟ್ಟದಿಂದ ಪಕ್ಷ ಸಂಘಟಿಸಲು ಉದ್ದೇಶಿಸಿರುವ ಬಿಜೆಪಿ, ಡಿಸೆಂಬರ್ 4ರಂದು ದಾವಣಗೆರೆಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲು ನಿರ್ಧರಿಸಿದೆ.
ದಾವಣಗೆರೆ: ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಡಿ.4ರಂದು ಬಿಜೆಪಿಯ 'ಗ್ರಾಮ ಸ್ವರಾಜ್ಯ' ಸಮಾವೇಶ - Grama Swarajya Convention davanagere
ದಾವಣಗೆರೆಯಲ್ಲಿ ಡಿ.4ರಂದು ಬಿಜೆಪಿಯ ಕಾರ್ಯಕರ್ತರನ್ನು ಚುರುಕುಗೊಳಿಸಲು ಗ್ರಾಮ ಸ್ವರಾಜ್ಯ ಸಭೆ ನಡೆಯಲಿದೆ. ಆ ದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದರಾದ ನಾರಾಯಣಸ್ವಾಮಿ, ಜಿ.ಎಸ್ ಬಸವರಾಜ್, ಬಿ.ಎಸ್ ರಾಘವೇಂದ್ರ, ಅರವಿಂದ್ ಲಿಂಬಾವಳಿ, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.
ದಾವಣಗೆರೆಯಲ್ಲಿ ಡಿ.4ರಂದು ಬಿಜೆಪಿಯ ಕಾರ್ಯಕರ್ತರನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ಯ ಸಭೆ ಹಮ್ಮಿಕೊಂಡಿದೆ. ದಾವಣಗೆರೆ ಜಿಎಂ ಐಟಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಾರ್ಯಕ್ರಮ ನೇತೃತ್ವ ವಹಿಸಲಿದ್ದಾರೆ. ಸಂಸದರಾದ ನಾರಾಯಣಸ್ವಾಮಿ, ಜಿ.ಎಸ್ ಬಸವರಾಜ್, ಬಿ.ಎಸ್ ರಾಘವೇಂದ್ರ, ಅರವಿಂದ್ ಲಿಂಬಾವಳಿ, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದರು.
ಗ್ರಾಮ ಸ್ವರಾಜ್ ಕಾರ್ಯಕ್ರಮದ ಮೂಲಕ ಪಕ್ಷದ ಕಾರ್ಯಕರ್ತರಿಗೆ ಗ್ರಾಮ ಪಂಚಾಯಿತಿ ಚುನಾವಣೆಗೆ ಅನುಕೂಲವಾಗುವಂತೆ ಹುರುಪು ತುಂಬಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.