ದಾವಣಗೆರೆ: ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಶುಕ್ರವಾರಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 4,457 ನಾಮಪತ್ರಗಳು ಸಲ್ಲಿಕೆಯಾಗಿದೆ.
ಸ್ವೀಕೃತವಾದ ನಾಮಪತ್ರಗಳ ವಿವರ ಮೊದಲ ಹಂತದಲ್ಲಿ ದಾವಣಗೆರೆ, ಹೊನ್ನಾಳಿ, ಜಗಳೂರು ಸೇರಿದಂತೆ ಮೂರು ತಾಲೂಕಿನಲ್ಲಿ ಒಟ್ಟು 88 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಒಟ್ಟು 1,301 ಸ್ಥಾನಗಳಿವೆ.
ಓದಿ:ಗ್ರಾಮ ಪಂಚಾಯತ್ ಚುನಾವಣೆ.. ಬಳ್ಳಾರಿಯಲ್ಲಿ 1,738 ಸ್ಥಾನಗಳಿಗೆ 5,149 ನಾಮ ಪತ್ರಗಳ ಸಲ್ಲಿಕೆ
ದಾವಣಗೆರೆ ತಾಲೂಕಿನಲ್ಲಿ ಒಟ್ಟು 38 ಗ್ರಾಮ ಪಂಚಾಯತ್‌ಗಳಿದ್ದು, 581 ಸ್ಥಾನಗಳಿಗೆ ಒಟ್ಟು 2,080 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನಲ್ಲಿ 28 ಗ್ರಾಮ ಪಂಚಾಯತ್‌ಗಳಿದ್ದು, 323 ಸ್ಥಾನಗಳಿಗೆ ಒಟ್ಟು 1,121 ನಾಮಪತ್ರಗಳು ಸಲ್ಲಿಕೆಯಾಗಿವೆ. ಜಗಳೂರು ತಾಲೂಕಿನಲ್ಲಿ 22 ಗ್ರಾಮ ಪಂಚಾಯತ್‌ಗಳಿದ್ದು, 397 ಸ್ಥಾನಗಳಿಗೆ 1,257 ನಾಮಪತ್ರಗಳು ಸಲ್ಲಿಕೆಯಾಗಿವೆ.