ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಾಣೆ 2020 ರ ಅಂತಿಮ ಮತದಾರರ ಪಟ್ಟಿ ಪ್ರಕಟ

ಗ್ರಾಮ ಪಂಚಾಯತಿಯ ಸಾರ್ವತ್ರಿಕ ಚುನಾವಣೆ-2020 ಕ್ಕೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಆಯಾ ಪಂಚಾಯಿತಿಗಳಿಗೆ ಪ್ರಚುರ ಪಡಿಸಲಾಗಿದೆ ಎಂದು ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ ತಿಳಿಸಿದ್ದಾರೆ.

ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ 
ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ 

By

Published : Sep 2, 2020, 11:21 PM IST

ಹರಿಹರ:ಗ್ರಾಮ ಪಂಚಾಯತಿಯ ಸಾರ್ವತ್ರಿಕ ಚುನಾವಣೆ-2020 ಕ್ಕೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಆಯಾ ಪಂಚಾಯಿತಿಗಳಿಗೆ ಪ್ರಚುರ ಪಡಿಸಲಾಗಿದೆ ಎಂದು ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ ತಿಳಿಸಿದ್ದಾರೆ.

ಸಾರ್ವಜನಿಕರ ಮಾಹಿತಿಗಾಗಿ ತಹಶೀಲ್ದಾರರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಾಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸುವ ಕುರಿತು ಮಾನ್ಯ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ನಿಯಮ 5(3) ರಂತೆ ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ.

ಈ ಕುರಿತಂತೆ ಗ್ರಾಮ ಪಂಚಾಯತಿಯ ಕಚೇರಿಯಲ್ಲಿ, ತಾಲೂಕು ಪಂಚಾಯಿತಿ ಕಛೇರಿ ಹಾಗೂ ತಾಲೂಕು ಕಛೇರಿಯಲ್ಲಿ ಪ್ರಕಟಿಸಲು ನಿರ್ದೇಶಿಸಿರುವುದರಿಂದ ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆ- 2020 ಕ್ಕೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಪರಿಶೀಲನೆ ಮುಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details