ದಾವಣಗೆರೆ: ಮಡಿಕೇರಿಯಲ್ಲಿ ಅಧಿಕಾರಿವೋರ್ವ ತನ್ನ ಖಾತೆಗೆ ಸರ್ಕಾರದ ಹಣ ವರ್ಗಾವಣೆ ಮಾಡಿಕೊಂಡಿರುವ ವಿಚಾರ ಗಮನಕ್ಕೆ ಬಂದಿದ್ದು, ಆ ಅಧಿಕಾರಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಸರ್ಕಾರದ ಕೋಟ್ಯಂತರ ರೂ. ಹಣ ಸ್ವಂತ ಖಾತೆಗೆ ವರ್ಗಾವಣೆ: ಅಧಿಕಾರಿಯನ್ನು ಮನೆಗೆ ಕಳಿಸಿದ್ರು ಸಚಿವ ಈಶ್ವರಪ್ಪ - ಸರ್ಕಾರಿ ಹಣ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡ ಅಧಿಕಾರಿ
ಸರ್ಕಾರದ ಕೋಟ್ಯಂತರ ರೂಪಾಯಿ ಹಣವನ್ನ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡ ಮಡಿಕೇರಿಯ ಅಧಿಕಾರಿಯನ್ನ ಅಮಾನತು ಮಾಡಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
![ಸರ್ಕಾರದ ಕೋಟ್ಯಂತರ ರೂ. ಹಣ ಸ್ವಂತ ಖಾತೆಗೆ ವರ್ಗಾವಣೆ: ಅಧಿಕಾರಿಯನ್ನು ಮನೆಗೆ ಕಳಿಸಿದ್ರು ಸಚಿವ ಈಶ್ವರಪ್ಪ](https://etvbharatimages.akamaized.net/etvbharat/prod-images/768-512-4980880-thumbnail-3x2-brm.jpg)
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ, ಸಚಿವ
ನಗರದಲ್ಲಿ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ಹಣವನ್ನು ಅಧಿಕಾರಿವೋರ್ವ ವರ್ಗಾವಣೆ ಮಾಡಿಕೊಂಡಿದ್ದಾನೆ. ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದ್ದು, ಸಮಗ್ರ ತನಿಖೆಗೆ ಸೂಚಿಸಲಾಗಿದೆ. ಹಿಂದಿನ ಸಚಿವರಿದ್ದಾಗಲೂ ಈ ರೀತಿ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಇನ್ನು, ರಾಜ್ಯ ಸರ್ಕಾರ ಮೂರು ತಿಂಗಳು ಇರುತ್ತೆ, ಆರು ತಿಂಗಳು ಇರುತ್ತೆ ಎಂಬುದು ಮಾಧ್ಯಮಗಳಲ್ಲಿ ಬರುತ್ತಿದೆ ಅಷ್ಟೇ. ಮೂರುವರೆ ವರ್ಷ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂಬ ವಿಶ್ವಾಸವನ್ನು ಸಚಿವ ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.