ದಾವಣಗೆರೆ:ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ರಾಜ್ಯದ ಜನರ ಆಕ್ರೋಶಕ್ಕೆ ಕಾರಣ ಆಗಿದೆ. ರಾಜಕೀಯ ವಲಯದಲ್ಲಿ ಕೂಡ ಬಿರುಗಾಳಿ ಎಬ್ಬಿಸಿದೆ. ಅದರೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಸಾಹೇಬರು ಮಾತ್ರ ನನಗೆ ಇದರ ಬಗ್ಗೆ ಗೊತ್ತೇ ಇಲ್ಲ ಎಂದು ನುಣಿಚಿಕೊಳ್ಳುವ ಯತ್ನ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ರೇಪ್ ನಡೆದ್ರೇ ನನ್ನನ್ನು ಯಾಕೆ ಕೇಳ್ತಿರಪ್ಪೋ ಎಂದು ಉತ್ತರ ನೀಡುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾದರು. ಇನ್ನು ನಾನು ಏನೂ ನೋಡಿಲ್ಲಪ್ಪಾ, ನಮ್ಮ ಜಿಲ್ಲೆಯಲ್ಲಿ ಏನಾದರೂ ಆಗಿದ್ರೇ ಕೇಳು ಅದಕ್ಕೆ ಖಂಡಿತವಾಗಿ ಉತ್ತರಿಸಿ ಅಧಿಕಾರಿಗಳಿ ಹೇಳಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.