ಕರ್ನಾಟಕ

karnataka

ETV Bharat / state

ಜಿಲ್ಲೆಯ ಒಬ್ಬರಿಗಾದರೂ ಸಚಿವ ಸ್ಥಾನ ನೀಡಿ : ಸಂಸದ ಸಿದ್ದೇಶ್ವರ್ - ಸಂಸದ ಸಿದ್ದೇಶ್ವರ್ ಲೆಟೆಸ್ಟ್ ನ್ಯೂಸ್​

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದು, ಲೋಕಸಭಾ ಸದಸ್ಯ ಜಿ. ಎಂ.‌ ಸಿದ್ದೇಶ್ವರ್ ಅವರು ಜಿಲ್ಲೆಯ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.

MP Siddeshwar
ಸಂಸದ ಸಿದ್ದೇಶ್ವರ್

By

Published : Jan 29, 2020, 4:32 PM IST

ದಾವಣಗೆರೆ : ಜಿಲ್ಲೆಯ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ನೀಡಬೇಕೆಂದು ಲೋಕಸಭಾ ಸದಸ್ಯ ಜಿ. ಎಂ.‌ ಸಿದ್ದೇಶ್ವರ್ ಆಗ್ರಹಿಸಿದರು.

ಲೋಕಸಭಾ ಸದಸ್ಯ ಜಿ. ಎಂ.‌ ಸಿದ್ದೇಶ್ವರ್

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯವರಿಗೆ ಮಂತ್ರಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದೇ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಪರಮಾಧಿಕಾರ. ಈ ಬಗ್ಗೆ ಅವರೇ ನಿರ್ಧಾರ ಮಾಡ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು 17 ಶಾಸಕರು ಮುಖ್ಯ ಕಾರಣ. ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಅವರು ಮನವಿ ಮಾಡಿದರು.

ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕು ಎಂದು ಕೇಳಿದ್ದೇವೆ. ಯಾರಿಗಾದ್ರೂ ನೀಡಲಿ, ನಮಗೆ ಸಂತೋಷ. ಇವರಿಗೆ ನೀಡಿ ಎಂದು ಕೇಳಲ್ಲ ಎಂದರು.

ABOUT THE AUTHOR

...view details