ಕರ್ನಾಟಕ

karnataka

ETV Bharat / state

ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸೇರಿದ ಬೆಣ್ಣೆನಗರಿಯ ಪುಟ್ಟ ಬಾಲಕಿಯ ಸಾಧನೆ - India Book of Record

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಅಲ್ಲೇ ಕಲಿತು ಇಂಡಿಯಾ ಬುಕ್ ಆಫ್​ ರೆಕಾರ್ಡ್​ನಲ್ಲಿ ತನ್ನ ಹೆಸರು ದಾಖಲಿಸಿದ ಈ ಪೋರಿಯ ಸಾಧನೆ ಮೆಚ್ಚುವಂಥದ್ದು.

the-3rd-standard-girls-name-recorded-in-the-india-book-of-record
ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಹೆಸರು ಅಚ್ಚೊತ್ತಿದ 3ನೇ ತರಗತಿ ಪೋರಿ

By

Published : Aug 29, 2021, 2:56 PM IST

ದಾವಣಗೆರೆ:ಆಕೆ ಇನ್ನೂ 3ನೇ ತರಗತಿ ಕಲಿಯುತ್ತಿರುವ ಪುಟ್ಟ ಬಾಲಕಿ. ಆದ್ರೆ ಆಕೆಯ ನೆನಪಿನ ಶಕ್ತಿ ಮಾತ್ರ ಅಗಾಧ. ಈ ವಿಶೇಷ ಶಕ್ತಿಯಿಂದಲೇ ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಿಸಿದ್ದಾಳೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ನಿವಾಸಿಯಾಗಿರುವ ತಿಪ್ಪೇಸ್ವಾಮಿ ಹಾಗೂ ಚೈತ್ರ ದಂಪತಿಯ ಮಗಳು ಅದ್ವಿಕ ಕಾವ್ಯ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಈಕೆ ದೇಶದ ಸಂವಿಧಾನ, ರಾಜ್ಯ, ತಾಲೂಕುಗಳ ಹೆಸರು ಸೇರಿದಂತೆ ಹಲವು ವಿಚಾರಗಳನ್ನು ಪಟಪಟನೆ ಹೇಳಬಲ್ಲಳು.

ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಹೆಸರು ಅಚ್ಚೊತ್ತಿದ ಬೆಣ್ಣೆನಗರಿಯ 3ನೇ ತರಗತಿ ಪೋರಿ

ಅದ್ವಿಕ ಕಾವ್ಯ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳ ಹೆಸರನ್ನು ನಿರರ್ಗಳವಾಗಿ ಹೇಳುವ ಸಾಮರ್ಥ್ಯ ಹೊಂದಿದ್ದಾಳೆ. ಸಂವಿಧಾನದ ಪ್ರಸ್ತಾವನೆ ಹಾಗೂ ಅದರ ಲಕ್ಷಣಗಳು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕವಿಗಳಾದ ಡಿ.ಎಸ್.ಕರ್ಕಿ, ಗೋವಿಂದ ಪೈ, ನಿಸಾರ್ ಅಹ್ಮದ್ ಇನ್ನಿತರೆ ಕವಿಗಳ ಕವಿತೆಗಳು, ಸಂಸ್ಕೃತ ಶ್ಲೋಕಗಳು, ಇಂಗ್ಲಿಷ್ ಕಥೆಗಳು, ವಚನಗಳು, ಶುಭಾಷಿತಗಳನ್ನು ಪಟಪಟನೇ ಹೇಳುತ್ತಾಳೆ. ಇಷ್ಟೆಲ್ಲ ಜ್ಞಾನ ಹೊಂದಿರುವ ಬಾಲಕಿ ಭವಿಷ್ಯದಲ್ಲಿ ಐಎಎಸ್ ಆಫೀಸರ್ ಆಗುವ ಕನಸು ಕಂಡಿದ್ದಾಳೆ.

ಅದ್ವಿಕಳ ಪೋಷಕರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸುತ್ತಾರೆ. ಆಕೆಯ ಎಲ್ಲಾ ಸಾಧನೆಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಅಲ್ಲೇ ಕಲಿತು ಇಂಡಿಯಾ ಬುಕ್ ಆಫ್​ ರೆಕಾರ್ಡ್​ನಲ್ಲಿ ತನ್ನ ಹೆಸರು ದಾಖಲಿಸಿದ ಈ ಪೋರಿಯ ಸಾಧನೆ ಮೆಚ್ಚುವಂಥದ್ದು.

ABOUT THE AUTHOR

...view details