ಕರ್ನಾಟಕ

karnataka

ETV Bharat / state

ಕಾಣೆಯಾಗಿದ್ದ ಮಗಳು ಮದುವೆಯಾಗಿ ಬಂದಳು... ಠಾಣೆ ಎದುರು ಹೈಡ್ರಾಮಾ!

ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಾಗೂ ಕಾಲೇಜು ಯುವತಿ ಓಡಿಹೋಗಿ ವಿವಾಹವಾದ ಘಟನೆ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಮೂಲಕ ಯುವತಿಯ ಪೋಷಕರು ನೀಡಿದ್ದ ನಾಪತ್ತೆ ಪ್ರಕರಣವು ಪ್ರೇಮ ವಿವಾಹದ ಮೂಲಕ ಸುಖಾಂತ್ಯ ಕಂಡಿದೆ.

ಪ್ರೇಮ ವಿವಾಹ

By

Published : Sep 10, 2019, 5:37 PM IST

ದಾವಣಗೆರೆ:ಪ್ರೀತಿಯಿಂದ ಬೆಳೆಸಿದ್ದ ಮಗಳು ಕಾಣೆಯಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರೆ, ಇತ್ತ ಮಗಳು ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಪೊಲೀಸ್​​ ಠಾಣೆಗೆ ಬಂದ ಘಟನೆ ನಗರದಲ್ಲಿ ನಡೆದಿದೆ.

ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ ಯುವಕ, ಯುವತಿ ತಾವಿಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಕಾರಣಕ್ಕೆ ರಾತ್ರಿ ಹೈಡ್ರಾಮಾವೇ ನಡೆಯಿತು.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪುಣಬಘಟ್ಟ ಗ್ರಾಮದ ಸತೀಶ್ ಕುಮಾರ ಹಾಗೂ ಶಾಲಿನಿ ಇಬ್ಬರು ಒಂದೇ ಗ್ರಾಮದವರು. ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಆಗಷ್ಟ 16ರಂದು ಹರಪನಹಳ್ಲಿಯಲ್ಲಿ ನೋಂದಣಿ ಕಚೇರಿಯಲ್ಲಿ ವಿವಾಹ ಕೂಡಾ ಆಗಿದ್ದಾರೆ. ಇಬ್ಬರು ಸಹ ವಯಸ್ಕರಾಗಿದ್ದು, ಆದರೆ ಜಾತಿ ಬೇರೆ ಬೇರೆ ಆಗಿದ್ದರಿಂದ ಹರಪನಹಳ್ಳಿ ಬಿಟ್ಟು ಬೆಂಗಳೂರಿಗೆ ಓಡಿ ಹೋಗಿದ್ದರು.

ಕಾಣೆಯಾಗಿದ್ದ ಮಗಳು ಮದುವೆಯಾಗಿ ಬಂದಳು

ದಾವಣಗೆರೆ ಕಾಲೇಜಿಗೆ ತೆರಳಿದ್ದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಯುವತಿಯ ತಂದೆ ದೂರು ನೀಡಿದ್ದರು. ಈ ಹಿನ್ನೆಲೆ ಬಡಾವಣೆ ಠಾಣೆಯ ಪೊಲೀಸರು ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಇದರಿಂದ ಠಾಣೆಯ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಯುವತಿ ಮಾತ್ರ ತಾನು ಇಷ್ಟಪಟ್ಟು ಮದುವೆ ಆಗಿದ್ದೇನೆ ಎಂದು ಪೊಲೀಸರೆದುರು ಸ್ಪಷ್ಟಪಡಿಸಿದ್ದಾಳೆ ಎಂದು ತಿಳಿದುಬಂದಿದೆ.

ಇನ್ನು ಗ್ರಾಮದಲ್ಲಿ ಶಾಲಿನಿ ಕುಟುಂಬದವರು ಸ್ವಲ್ಪ ಪ್ರಭಾವಿಗಳಾಗಿದ್ದು, ಈ ಕಾರಣಕ್ಕೆ ಇಬ್ಬರು ತಮ್ಮ ಗ್ರಾಮ ಪುಣಬಘಟ್ಟಕ್ಕೆ ಹೋಗಲು ಹೆದರುತ್ತಿದ್ದರು. ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಹಾಗೂ ಶಾಲಿನಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ ಯುವತಿ ಮನೆಯವರು ಒಪ್ಪಿರಲಿಲ್ಲ. ಯುವಕ ತನ್ನ ಪ್ರಾಣಕ್ಕೆ ಆಪತ್ತಿದ್ದು, ಹಾಗಾಗಿ, ಸೂಕ್ತ ರಕ್ಷಣೆ ನೀಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾನೆ.

ಯುವತಿಯ ಮನೆಯವರು ಆತನನ್ನು ಬಿಟ್ಟು ಬಾ ಎಂದು ಎಷ್ಟು ಹೇಳಿದರೂ ಆಕೆ ಮಾತ್ರ ಕೇಳಲಿಲ್ಲ. ತಾನು ಇಷ್ಟಪಟ್ಟು ಮದುವೆಯಾಗಿದ್ದು, ಆತನ ಜೊತೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ. ಕಾರಣ ಪೊಲೀಸರು ಸಂಬಂಧಿಕರ ಸಮ್ಮುಖದಲ್ಲೇ ಹೇಳಿಕೆ ಪಡೆದು ಯುವಕನ ಜೊತೆ ಯುವತಿಯನ್ನು ಕಳುಹಿಸಿಕೊಟ್ಟಿದ್ದಾರೆ.

ABOUT THE AUTHOR

...view details