ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್​​ ಭೀತಿ: ಮುನ್ನೆಚ್ಚರಿಕಾ ಕ್ರಮಕ್ಕೆ ಗಂಗೂಬಾಯಿ ಮಾನಕರ ಸೂಚನೆ - ಕೊರೋನಾ ವೈರಸ್​​ ಭೀತಿ

ಕೊರೊನಾ ವೈರಸ್​​ ಭೀತಿ ರಾಜ್ಯಾದ್ಯಂತ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಗಂಗೂಬಾಯಿ ಮಾನಕರ್
Gangubai manakar

By

Published : Mar 6, 2020, 5:47 PM IST

ಬಾಗಲಕೋಟೆ:ಕೊರೊನಾ ವೈರಸ್​​ ಭೀತಿ ರಾಜ್ಯಾದ್ಯಂತ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಜಿಲ್ಲಾ ಪಂಚಾಯತ್​ ಸಿಇಒ ಗಂಗೂಬಾಯಿ ಮಾನಕರ

ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಭೀತಿಯಿಂದ ಮಾಸ್ಕ್​ಗಳ ಮಾರಾಟ ಸಾಕಷ್ಟಾಗುತ್ತಿದೆ. ಜನ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಜನರು ಹೆಚ್ಚಾಗಿ ಭಾಗಿಯಾಗಬಾರದು. ರೈಲ್ವೆ ನಿಲ್ದಾಣ, ಬಸ್​ ನಿಲ್ದಾಣ, ಜಾತ್ರೆ ಮೊದಲಾದ ಕಡೆಗಳಲ್ಲಿ ವೈರಸ್​​ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಚೀನಾ ಹಾಗೂ ಪ್ಯಾರಿಸ್​ನಿಂದ ಐದು ಜನರು ಬಾಗಲಕೋಟೆ ನಗರಕ್ಕೆ ಆಗಮಿಸಿದ್ದು, ಅವರ ಮೇಲೆ ಆರೋಗ್ಯ ಇಲಾಖೆ‌ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಇಲ್ಲಿನ‌ ನಿವಾಸಿಗಳು ಕೊರೊನಾ ವೈರಸ್ ಹಿನ್ನೆಲೆ​ ಭಯದಿಂದ ಆಗಮಿಸಿದ್ದಾರೆ. ಅವರಿಗೆ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡಿಲ್ಲ. ಆದರೂ ಸಹ‌ ದಿನಾಲು ತಪಾಸಣೆ ಮಾಡಲಾಗುತ್ತದೆ. ಈ ಬಗ್ಗೆ ಆರೋಗ್ಯ ‌ಇಲಾಖೆ‌ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ ಎಂದು‌ ತಿಳಿಸಿದರು.

ABOUT THE AUTHOR

...view details