ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ್ ತಿಲಕ್, ವಿನಾಯಕ ದಾಮೋದರ್ ಸಾವರ್ಕರ್ ಫ್ಲೆಕ್ಸ್ ವಿತರಣೆ ಕಾರ್ಯ ಆರಂಭವಾಗಿದೆ.
ಸಾವರ್ಕರ್ ಅವರನ್ನು ವಿರೋಧಿಸುವವರಿಗೆ ಟಾಂಗ್ ನೀಡುವ ಜೊತೆಗೆ ಅವರ ಹೋರಾಟದ ಬಗ್ಗೆ ಅರಿವು ಮೂಡಿಸಲು ದಾವಣಗೆರೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಪುಸ್ತಕ ಹಾಗು ಫೋಟೋ, ಫ್ಲೆಕ್ಸ್ಗಳನ್ನು ಮನೆ ಮನೆಗೆ ಮತ್ತು ಗಣೇಶ ಉತ್ಸವ ಸಮಿತಿಗಳಿಗೆ ನೀಡುತ್ತಿದ್ದಾರೆ.
ನಗರದಲ್ಲಿ ನಡೆಯುವ ಗಣೇಶ ಉತ್ಸವ ಕಾರ್ಯಕ್ರಮಗಳಲ್ಲಿ ಸಾವರ್ಕರ್, ತಿಲಕ್ ಹಾಗು ಪುನೀತ್ ರಾಜ್ಕುಮಾರ್ ಫೋಟೋ ಇಡಲು ನಿರ್ಧಾರ ಮಾಡಲಾಗಿದೆ. ಮಾಜಿ ಮೇಯರ್, ಹಿಂದೂ ಪರ ಹೋರಾಟಗಾರ ಎಸ್.ಟಿ ವೀರೇಶ್ ನೇತೃತ್ವದಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.
ತಿಲಕ್, ಸಾವರ್ಕರ್ ಫ್ಲೆಕ್ಸ್ ವಿತರಣೆ ಇದನ್ನೂ ಓದಿ:ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ.. ಕೇಸರಿ ಧ್ವಜ, ತಿಲಕ್, ಸಾವರ್ಕರ್ ಫ್ಲೆಕ್ಸ್ ವಿತರಣೆ
ಮನೆಗಳಿಗೆ ಹಾಗು ಗಣಪತಿ ಉತ್ಸವಗಳಿಗೆ ಉಚಿತವಾಗಿ ಸಾವರ್ಕರ್ ಫೋಟೋ ನೀಡುತ್ತಿರುವ ಬಿಜೆಪಿ ಮುಖಂಡರು, ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಲು ಸಾವರ್ಕರ್, ತಿಲಕ್ ಭಾವಚಿತ್ರಗಳ ಜೊತೆ ಬೇರೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಸಹ ವಿತರಣೆ ಮಾಡುತ್ತಿದ್ದಾರೆ. ದಾವಣಗೆರೆ ನಗರದ ವಿವಿಧ ವಾರ್ಡ್ಗಳಲ್ಲಿ ಸಾವರ್ಕರ್ ಫೋಟೋ ಅಭಿಯಾನ ಆರಂಭವಾಗಿದ್ದು, ಒಂದು ಸಾವಿರಕ್ಕೂ ಹೆಚ್ಚು ಫೋಟೋ ಫ್ಲೆಕ್ಸ್ ಗಳನ್ನು ನೀಡಲು ನಿರ್ಧರಿಸಲಾಗಿದೆ.