ಕರ್ನಾಟಕ

karnataka

ಬೆಣ್ಣೆ ನಗರಿಯ ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ

By

Published : Sep 3, 2019, 1:27 PM IST

ಬೆಣ್ಣೆ ನಗರಿ ದಾವಣಗೆರೆಯ ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಹಾಗೂ ವಿಶಿಷ್ಟ ರೀತಿ ಗಣೇಶ ಚತುರ್ಥಿ ಹಬ್ಬ ಆಚರಣೆ ಮಾಡಲಾಯ್ತು.

ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ

ದಾವಣಗೆರೆ:ಜಿಲ್ಲೆಯ ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವದ ಕುರಿತು ಅರಿವು ಮೂಡಿಸಲಾಯ್ತು.

ಶಾಲಾ ಮಕ್ಕಳಿಗೆ ಧರ್ಮ, ಸಂಸ್ಕೃತಿ ಬಗ್ಗೆ ತಿಳಿಸಿಕೊಡುವ ಸಲುವಾಗಿ ಜಾತಿ, ಮತ, ಪಂಥ ಬೇಧವಿಲ್ಲದೆ ಭ್ರಾತೃತ್ವ ಮನೋಭಾವ ಬೆಳೆಸುವ ಸಲುವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬಾಳೆಹೊನ್ನೂರು ಪೀಠದ ರಂಭಾಪೂರಿ ಶ್ರೀಗಳಿಂದ ವಿದ್ಯಾರ್ಥಿಗಳ ಹಿತಕ್ಕೆ ಇಷ್ಟಲಿಂಗ ಪೂಜೆ ಮಾಡಿಸಲಾಯಿತು.

ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ

ಮಕ್ಕಳಿಗೆ ಕೇವಲ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇತ್ತೀಚೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಕಲೆ, ಧರ್ಮದ ಬಗ್ಗೆ ಗೊತ್ತಿಲ್ಲದಂತಾಗಿದೆ. ಗಣೇಶ ಹಬ್ಬದ ಮಹತ್ವ ತಿಳಿಯದ ಯುವಕರು ಕುಣಿದು ಕುಪ್ಪಳಿಸುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಆಚಾರ, ವಿಚಾರ ಸಂಸ್ಕೃತಿ ಬೆಳಸಬೇಕಿದೆ. ಹಬ್ಬ ಆಚರಣೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂಬ ಸದುದ್ದೇಶದಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು, ಇಷ್ಟಲಿಂಗ ಪೂಜೆಯ ಬಗ್ಗೆ ತಿಳಿಸಿಕೊಡಲಾಯಿತು. ಶಾಲೆಯಲ್ಲಿ ಕೇವಲ ಶಿಕ್ಷಣ ಪಡೆದರೆ ಸಾಲದು. ನಮ್ಮ ಸಂಸ್ಕೃತಿ ಬಗ್ಗೆಯೂ ತಿಳಿಸಿಕೊಡಬೇಕು.ಇತ್ತೀಚಿಗೆ ಗಣೇಶ ಹಬ್ಬ ಅರ್ಥವನ್ನೇ ಕಳೆದುಕೊಂಡಿದೆ. ಹಾಗಾಗಿ ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಕಾರ್ಯಕ್ರಮದ ಅತಿಥಿಗಳು ಅಭಿಪ್ರಾಯಪಟ್ಟರು.

ABOUT THE AUTHOR

...view details