ಕರ್ನಾಟಕ

karnataka

ETV Bharat / state

ಪಲ್ಟಿಯಾದ ಹಿಂದೂ ಏಕತಾ ಗಣಪ : ನಿಮಜ್ಜನ ಮೆರವಣಿಗೆ ವೇಳೆ ದುರ್ಘಟನೆ - ಹಿಂದೂ ಏಕತಾ ಗಣಪತಿ ನಿಮಜ್ಜನ

ಹಿಂದೂ ಏಕತಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.

ಪಲ್ಟಿಯಾದ ಹಿಂದೂ ಏಕತಾ ಗಣಪ

By

Published : Sep 12, 2019, 5:17 PM IST

ದಾವಣಗೆರೆ :ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.

ಪಲ್ಟಿಯಾದ ಹಿಂದೂ ಏಕತಾ ಗಣಪ

ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿಯ ಮೂರ್ತಿ ನಿಮಜ್ಜನ ವೇಳೆ ಡಿಜೆ ಬಳಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗಣಪತಿ ಸಂಘಟನಾ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. 6 ಸ್ಪೀಕರ್​ ಬಾಕ್ಸ್​ ಗೆ ಸಂಘಟನೆ ಅನುಮತಿ ಕೇಳಿತ್ತು, ಆದ್ರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಡಿಜೆ ಬಳಸಿದ್ದಕ್ಕೆ ಪೊಲೀಸರು ಮೆರವಣಿಗೆ ತಡೆದು ಸ್ವತಃ ತಾವೇ ಮೂರ್ತಿ ವಿಸರ್ಜನೆಗೆ ಮುಂದಾಗಿದ್ದಾರೆ. ಈ ವೇಳೆ ಟ್ರಾಕ್ಟರ್ ಟ್ರಾಲಿಯಲ್ಲಿದ್ದ ಗಣೇಶನ ಮೂರ್ತಿ ಕೆಳಗೆ ಬಿದ್ದಿದೆ. ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಸಮೀಪದಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಗಣಪನ ಮೂರ್ತಿ ಪೊಲೀಸರು ವಿಸರ್ಜಿಸಿದರು.

ABOUT THE AUTHOR

...view details