ದಾವಣಗೆರೆ: 'ಗಾಂಧಿ ಸಂಕಲ್ಪ ಯಾತ್ರೆ' ಪ್ರಯುಕ್ತ ಇಂದು ದಾವಣಗೆರೆ ನಗರದ ನಿಟ್ಟುವಳ್ಳಿ ಶ್ರೀರಾಮ ಬಡಾವಣೆಯಿಂದ ಸಂಸದ ಜಿಎಂ ಸಿದ್ದೇಶ್ವರ್ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಚತೆ ಅರಿವಿಗೆ ದಾವಣಗೆರೆಯಲ್ಲಿ 'ಗಾಂಧಿ ಸಂಕಲ್ಫಯಾತ್ರೆ' - Gandhi Sankalpa Yatra at Davangere
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಹಾಗೂ ಸಂವಿಧಾನದ 370, 35ನೇ ಕಲಂ ರದ್ಧತಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ದಾವಣಗೆರೆಯಲ್ಲಿ ಇಂದು 'ಗಾಂಧಿ ಸಂಕಲ್ಪ ಯಾತ್ರೆ' ಮಾಡಲಾಯಿತು.

ಗಾಂಧಿ ಸಂಕಲ್ಫಯಾತ್ರೆ
ಗಾಂಧಿ ಸಂಕಲ್ಫಯಾತ್ರೆ
ನಗರದ ಶ್ರೀರಾಮ ಬಡಾವಣೆಯಿಂದ ಆರ್.ಎಚ್. ವೃತ್ತ ಡಿಸಿಎಂ ರಸ್ತೆ, ರಾಷ್ಟ್ರೋತ್ಥಾನ ಶಾಲೆ, ಡಾಂಗೇ ಪಾರ್ಕ್ ಮೂಲಕ ಕೆಟಿಜೆ ನಗರದ ಬಲಮುರಿ ಗಣಪತಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು.
ಈ ಸಂದರ್ಭ ಮಾತನಾಡಿದ ಸಂಸದ ಜಿಎಂ ಸಿದ್ದೇಶ್ವರ್, ಗಾಂಧಿ ಜಯಂತಿ ಹಿನ್ನಲೆಯಲ್ಲಿ ಸ್ವಚ್ಛತೆ ಹಾಗೂ 370, 35ನೇ ವಿಧಿ ರದ್ಧತಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಂಕಲ್ಪಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.