ಕರ್ನಾಟಕ

karnataka

ETV Bharat / state

ಸಂಭ್ರಮದಿಂದ ಗಂಧದಗುಡಿ ಸಿನಿಮಾ ಕಣ್ತುಂಬಿಕೊಂಡ ಅಪ್ಪು ಅಭಿಮಾನಿಗಳು - puneeth rajkumar

ಪುನಿತ್​ ರಾಜ್​ಕುಮಾರ್​ ಅವರ ಗಂಧದಗುಡಿಗೆ ದಾವಣಗೆರೆ ಜನ ಮುಂಜಾನೆಯಿಂದಲೇ ಚಿತ್ರ ಮಂದಿರದ ಎದುರು ಜಮಾಯಿಸಿದ್ದರು. ಮೊದಲ ಶೋಗೆ 4 ಗಂಟೆಯಿಂದಲೇ ಜನ ಬಂದು ಟಿಕೆಟ್​ಗೆ ಕಾದು ನಿಂತಿದ್ದರು.

puneeth rajkumar
ಸಂಭ್ರಮದಿಂದ ಗಂಧದಗುಡಿ ಸಿನಿಮಾವನ್ನು ಕಣ್ತುಂಬಿಕೊಂಡ ಅಪ್ಪು ಅಭಿಮಾನಿಗಳು

By

Published : Oct 28, 2022, 9:27 AM IST

Updated : Oct 28, 2022, 12:50 PM IST

ದಾವಣಗೆರೆ:ನಗರದ ವಸಂತ ಸಿನಿಮಾ ಮಂದಿರದಲ್ಲಿ ಗಂಧದಗುಡಿ ಪ್ಯಾನ್ಸ್ ಶೋ ಆರಂಭವಾಗಿದೆ. ವಸಂತ ಥೀಯಟರ್ ಬಳಿ ಜಮಾಯಿಸಿದ ಅಭಿಮಾನಿಗಳು ಥಿಯೇಟರ್​ಗೆ ಬಾಳೆ ಕಂದು ಮಾವಿನ ತೋರಣ ಕಟ್ಟಿ ಸಂಭ್ರಮಿಸಿದರು. ಚಿತ್ರಮಂದಿರವನ್ನು ಮದುವೆ ದಿಬ್ಬಣದ ರೀತಿ ಸಿಂಗರಿಸಿದ ಅಭಿಮಾನಿಗಳು, ಮೊದಲ ಶೋ ನೋಡಲು ಬೆಳಗ್ಗೆ 4 ಗಂಟೆಯಿಂದಲೇ ಕಾದು ಕುಳಿತಿದ್ದರು.

ಅಪ್ಪು ಪೋಟೋ, ಬಾವುಟ ಹಿಡಿದು, ಪ್ಲೆಕ್ಸ್​ಗಳನ್ನು ಕಟ್ಟಿ ಅಭಿಮಾನ ವ್ಯಕ್ತಪಡಿಸಿದ ಅಭಿಮಾನಿಗಳು. ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ಹರ್ಷೋದ್ಗಾರ ಮನೆ‌ಮಾಡಿದ್ದು, ತೆರೆಯ ಮೇಲೆ ಅಪ್ಪು ಚಿತ್ರ ಕಂಡ ತಕ್ಷಣ ಕೇಕೆ ಹಾಕಿ ಅಪ್ಪು ಅಪ್ಪು ಎಂದು ಕೂಗುತ್ತಾ. ಅಪ್ಪು ಬಾವುಟ ಫೋಟೋ ಹಿಡಿದು ಸಿನಿಮಾ ವೀಕ್ಷಣೆ ಮಾಡಿದರು.

ಸಂಭ್ರಮದಿಂದ ಗಂಧದಗುಡಿ ಸಿನಿಮಾ ಕಣ್ತುಂಬಿಕೊಂಡ ಅಪ್ಪು ಅಭಿಮಾನಿಗಳು

ಅಪ್ಪು ಫ್ಲೆಕ್ಸ್​ಗೆ ಹಾಲಿನ ಅಭಿಷೇಕ :ಅಪ್ಪು ಫ್ಲೆಕ್ಸ್ ಹಾಗೂ ಕಟೌಟ್​​ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ, ಪುಷ್ಪಾರ್ಚನೆ ನೆರವೇರಿಸಿ ಅಗರಬತ್ತಿ ಬೆಳಗುವ ಮೂಲಕ ಅಭಿಮಾನ ಮರೆದರು. ಇಡೀ ದಿನ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವ ಅಭಿಮಾನಿಗಳು, ರಕ್ತ ದಾನ, ಅಪ್ಪು ದೀಪೋತ್ಸವ, ಸೇರಿದಂತೆ ಹಲವು ಕಾರ್ಯಕ್ರಮ ನೆರವೇರಿಸುವಲು ಮುಂದಾಗಿದ್ದಾರೆ.

ಇದನ್ನೂ ಓದಿ :ಅಪ್ಪು ಗಂಧದಗುಡಿ ಪ್ರಿಮಿಯರ್ ಶೋ ನೋಡಿ‌ ಭಾವುಕರಾದ ಅಭಿಮಾನಿಗಳು

Last Updated : Oct 28, 2022, 12:50 PM IST

ABOUT THE AUTHOR

...view details