ದಾವಣಗೆರೆ:ಜಿಲ್ಲೆಯಲ್ಲಿ ಶುಕ್ರವಾರ 450 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.
ಜಗಳೂರು ತಾಲೂಕಿನ ಬಸವನಕೊಪ್ಪದ 56 ವರ್ಷದ ವ್ಯಕ್ತಿ, ಜಗಳೂರಿನ 57 ವರ್ಷದ ವ್ಯಕ್ತಿ , ಹರಿಹರ ತಾಲೂಕಿನ ಸಾಲಕಟ್ಟೆಯ 60 ವರ್ಷದ ವೃದ್ಧ ಹಾಗೂ ದೀತೂರು ಗ್ರಾಮದ 55 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ.
ದಾವಣಗೆರೆಯಲ್ಲಿ 178, ಹರಿಹರ- 72, ಜಗಳೂರು- 56, ಚನ್ನಗಿರಿ- 65, ಹೊನ್ನಾಳಿ- 76 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಮೂವರಲ್ಲಿ ಸೋಂಕು ಖಚಿತವಾಗಿದೆ. ಜಿಲ್ಲೆಯಲ್ಲಿ ಇನ್ನು 17,787 ಸೋಂಕಿತರಿದ್ದಾರೆ.
ಇದೇ ದಿನ 161 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 15,583 ಜನರು ಗುಣಮುಖರಾಗಿದ್ದು, ಇನ್ನು 2,157 ಸಕ್ರಿಯ ಪ್ರಕರಣಗಳಿವೆ. ಇಂದು 1,192 ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇನ್ನು 6,829 ಪರೀಕ್ಷಾ ವರದಿಗಳಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.