ದಾವಣಗೆರೆ: ಪಾರ್ಲಿಮೆಂಟ್ನಲ್ಲಿ ಕೂತು ಮಾಡಿರುವ ಕಾನೂನು ದೊಡ್ಡದೆಂದು ಹೇಳ್ತಾರೆ. ಆದರೆ ರೈತ ವಿರೋಧಿ, ಜನ ವಿರೋಧಿಯಾಗಿರುವ ಕಾನೂನುಗಳನ್ನು ಜಾರಿಗೆ ತಂದಿದ್ದಾರೆಂದು ಮಾಜಿ ಕೇಂದ್ರ ಸಚಿವ ಮುನಿಯಪ್ಪ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠವನ್ನು ಕಲಿಸುತ್ತಾರೆ. ಎರಡು ಕೋಟಿ ಜನರಿಗೆ ಕೆಲಸ ಕೊಡ್ತೀವಿ ಎಂದು ಎಂದಿದ್ದ ಮೋದಿಯವರು ಇಲ್ಲಿಯ ತನಕ ಯಾವುದೇ ಕೆಲಸ ನೀಡಿಲ್ಲ. ಕೆಲಸ ಕೊಡಿಸುವ ಬದಲು ಇರುವಂತಹ ಕಾರ್ಮಿಕರನ್ನು ಬೀದಿಗೆ ತಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡುತ್ತದೆ ಎಂದರು.