ದಾವಣಗೆರೆ : ಸಚಿವ ಕೆಎಸ್ ಈಶ್ವರಪ್ಪ ನಿನ್ನೆ ಮತ್ತು ಇವತ್ತು ಬಾಕಿ ಉಳಿದ ಫೈಲ್ಗಳಿಗೆ ಸಹಿ ಮಾಡಿ ರಾಜೀನಾಮೆ ಕೊಡ್ತಾರೆ ಎಂದು ಮಾಜಿ ಸಚಿವ ಎಸ್ಎ.ಸ್ ಮಲ್ಲಿಕಾರ್ಜುನ್ ವ್ಯಂಗ್ಯವಾಡಿದರು. ದಾವಣಗೆರೆಯಲ್ಲಿ ಮಾತನಾಡಿ ಅವರು, ಸಚಿವ ಕೆ ಎಸ್ ಈಶ್ವರಪ್ಪನವರು ಅನ್ಯಾಯವಾಗಿ ಒಂದು ಜೀವ ಬಲಿ ಕೊಟ್ಟಿದ್ದಾರೆ. ಕಾಮಗಾರಿ ಮಾಡಿದ್ದಾರೆ ಎಂದರೆ ನಿರ್ದೇಶನ ಇಲ್ಲದೆ ಮಾಡ್ತಾರಾ, ಶೇ.40ರಷ್ಟು ಕಮೀಷನ್ ಕೇಳಿದ್ರೆ ಅವರು ಎಲ್ಲಿ ಹೋಗಬೇಕು ಹೇಳಿ ಎಂದರು.
ಈಶ್ವರಪ್ಪ ನಿನ್ನೆ-ಇವತ್ತು ಬಾಕಿ ಉಳಿದ ಫೈಲ್ಗಳಿಗೆ ಸಹಿ ಮಾಡಿ ರಾಜೀನಾಮೆ ಕೊಡ್ತಾರೆ : ಎಸ್ ಎಸ್ ಮಲ್ಲಿಕಾರ್ಜುನ್ - ದಾವಣಗೆರೆಯಲ್ಲಿ ಎಸ್ಎಸ್ ಮಲ್ಲಿಕಾರ್ಜುನ್ ಹೇಳಿಕೆ
ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದರೆ ನಾವು ಆಗೋದ್ರಲ್ಲಿ ತಪ್ಪೇನಿದೆ. ನಾನು ಕೂಡ ಸಿಎಂ ಆಕಾಂಕ್ಷಿಯಾಗಿದ್ದೇನೆ. ನಮ್ಮ ಪಕ್ಷದ ಸಿದ್ದರಾಮಯ್ಯ, ಡಿಕೆಶಿ ಹೊಂದಾಣಿಕೆಯಿಂದ ಇದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲವೂ ಹೈಕ್ಲಾಸ್ ಇದೆ. ಸಿದ್ದರಾಮಯ್ಯರನ್ನೇ ಸಿಎಂ ಮಾಡ್ತೀವಿ..
ನಾನು ಕೂಡ ಸಿಎಂ ಆಕಾಂಕ್ಷಿ: ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದರೆ ನಾವು ಆಗೋದ್ರಲ್ಲಿ ತಪ್ಪೇನಿದೆ. ನಾನು ಕೂಡ ಸಿಎಂ ಆಕಾಂಕ್ಷಿಯಾಗಿದ್ದೇನೆ. ನಮ್ಮ ಪಕ್ಷದ ಸಿದ್ದರಾಮಯ್ಯ, ಡಿಕೆಶಿ ಹೊಂದಾಣಿಕೆಯಿಂದ ಇದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲವೂ ಹೈಕ್ಲಾಸ್ ಇದೆ. ಸಿದ್ದರಾಮಯ್ಯರನ್ನೇ ಸಿಎಂ ಮಾಡ್ತೀವಿ.
ಅವರೇ ಪಕ್ಷದಲ್ಲಿ ಹಿರಿಯರು ಇದ್ದಾರೆ. ಅವರು ಯಾಕ್ ಆಗಬಾರದು?. ಹೈಕಮಾಂಡ್ ಯಾರು ಅಂತಾ ಹೇಳೋತ್ತೋ ಅವರನ್ನೇ ನಾವು ಸಿಎಂ ಮಾಡುತ್ತೇವೆ. ನಮ್ಮ ತಂದೆಯವರಿಗೂ ಕೂಡ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಬೊಮ್ಮಾಯಿ ಸಿಎಂ ಆಗಿದ್ದಾರೆ. ನಾನು ಆಗೋದ್ರಲ್ಲಿ ತಪ್ಪೇನಿದೆ ಎಂದು ಎಸ್ಎಸ್ ಮಲ್ಲಿಕಾರ್ಜುನ ಹಾಸ್ಯ ಪಟಾಕಿ ಹಾರಿಸಿದರು.