ದಾವಣಗೆರೆ: ನಮ್ಮ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಮಾಜಿ ಸಾರಿಗೆ ಸಚಿವ ಹೆಚ್.ಎಮ್. ರೇವಣ್ಣ ಗೊಂದಲವನ್ನು ದೂರ ಮಾಡಿದರು.
ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಇರುವ ಕುರುಬರ ಹಾಸ್ಟೆಲ್ನಲ್ಲಿ ನಡೆದ ಎಸ್ಟಿ ಹೋರಾಟ ಪೂರ್ವ ಸಿದ್ದತಾ ಸಭೆಯ ಮುಂಚಿತವಾಗಿ ಮಾತನಾಡಿದರು. ಕುರುಬರ ಎಸ್ಟಿ ಹೋರಾಟಕ್ಕೆ ಸಿದ್ದರಾಮಯ್ಯ ವಿರೋಧವಿಲ್ಲ. ಮೇಲಾಗಿ ಕನಕ ಗುರುಪೀಠದ ಸ್ವಾಮೀಜಿಗಳು ಸಿದ್ದರಾಮಯ್ಯ ಅವರಿಗೆ ಈ ವಿಚಾರ ತಿಳಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.