ದಾವಣಗೆರೆ: ಜಿಲ್ಲೆಯ ಹೊನ್ನಾಳಿಯ ಅರಣ್ಯ ರಕ್ಷರೊಬ್ಬರು ತಾಂಜೇನಿಯಾ ದೇಶದಲ್ಲಿರುವ ಮೌಂಟ್ ಕಿಲಿಮಾಂಜರ್ ಪರ್ವತವನ್ನು ಏರಿ ಸಾಹಸ ಮೆರೆದಿದ್ದಾರೆ. ಸುಮಾರು 12 ದಿನಗಳ ಕಾಲ ಚಾರಣ ಮಾಡಿದ್ದ ವಿಕ್ರಮ್, ಸುಮಾರು 5,895 ಮೀಟರ್ ಎತ್ತರದ ಮೌಂಟ್ ಕಿಲಿಮಾಂಜರ್ ಅನ್ನು ಏರುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತಾಂಜೇನಿಯಾಗೆ ತೆರಳಿದ್ದ ವಿಕ್ರಮ್ ಸಾಹಸಕ್ಕೆ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದ್ದರು. ಇನ್ನು ಸಾಹಸ ತೋರಿದ ಅರಣ್ಯ ರಕ್ಷಕ ವಿಕ್ರಂ, ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ಗ್ರಾಮದವರಾಗಿದ್ದಾರೆ. ಈಗಾಗಲೇ ವಿಕ್ರಮ ಮೌಂಟ್ ಎವರೆಸ್ಟ್, ಮೌಂಟ್ ಸತೋಪಂತ್ ಪರ್ವತವನ್ನೂ ಸಹ ಏರಿ ಬಂದಿದ್ದಾರೆ.